ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ವರ್ಷ ಒಳಗಿನ ಓಮೈಕ್ರಾನ್ ರೋಗಿಗಳು ಪ್ಯಾರಸಿಟಮಾಲ್ ತೆಗೆದುಕೊಳ್ಳಬಹುದು: ತಜ್ಞರು

Last Updated 20 ಜನವರಿ 2022, 15:06 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ಗಂಭೀರ ರೋಗಗಳಿಲ್ಲದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓಮೈಕ್ರಾನ್ ಸೋಂಕಿತರು, ಪ್ಯಾರಸಿಟಮಾಲ್‌ನೊಂದಿಗೆ ತಮ್ಮ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಎಂದು ಮಹಾರಾಷ್ಟ್ರದ ಕೋವಿಡ್ ಕಾರ್ಯಪಡೆಯ ಸದಸ್ಯ ಡಾ.ಶಶಾಂಕ್ ಜೋಶಿ ಹೇಳಿದ್ದಾರೆ.

ಹೀಲ್ ಫೌಂಡೇಶನ್‌ನ ಆನ್‌ಲೈನ್ ಶೋ ಹೆಲ್ತ್ ಫಾರ್ ಆಲ್‌ನ ಇತ್ತೀಚಿನ ಸಂಚಿಕೆಯಲ್ಲಿ ಮಾತನಾಡಿದ ಮುಂಬೈನ ಲೀಲಾವತಿ ಆಸ್ಪತ್ರೆಯ ಎಂಡೊಕ್ರಿನಾಲಜಿಸ್ಟ್ ಜೋಶಿ, ಎರಡು ದಿನಗಳಿಂದ ನಿರಂತರ ಜ್ವರದಿಂದ ಬಳಲುತ್ತಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡಿಟಿ ರೋಗಿಗಳಿಗೆ ವೈದ್ಯರು ಮಾಲ್‌ನುಪಿರವಿರ್‌ನಂತಹ ಆಂಟಿವೈರಲ್‌ಗಳನ್ನು ಸೂಚಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಆದರೆ, ‘ಯಾವುದೇ ಕೊಮೊರ್ಬಿಡಿಟಿಗಳಿಲ್ಲದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓಮೈಕ್ರಾನ್ ರೋಗಿಗಳು ಪ್ಯಾರಸಿಟಮಾಲ್‌ನೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು’ಎಂದು ಅವರು ಹೇಳಿದರು.

ಆದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಗರ್ಭಿಣಿಯರಿಗೆ ಅಥವಾ ಆಸ್ಪತ್ರೆ ದಾಖಲಾತಿ ಅಗತ್ಯವಿರುವ ರೋಗಿಗಳಿಗೆ ಪ್ಯಾರಸಿಟಮಾಲ್ ಅನ್ನು ಶಿಫಾರಸು ಮಾಡಬಾರದು ಎಂದು ಅವರು ಹೇಳಿದರು.

ಭಾರತದಲ್ಲಿ ಹದಿಹರೆಯದವರಿಗೆ ಅನುಮೋದಿಸಲಾದ ಕೋವಿಡ್ ಲಸಿಕೆ ಕೋವಾಕ್ಸಿನ್ ಜೊತೆಗೆ ಮಕ್ಕಳಿಗೆ ಪ್ಯಾರಸಿಟಮಾಲ್ 500 ಮಿಲಿ.ಗ್ರಾಂ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದು ಈ ಹಿಂದೆ ವರದಿಗಳು ಬಂದಿದ್ದವು.

ಕೋವಾಕ್ಸಿನ್ ಲಸಿಕೆ ಪಡೆದಿರುವ ಹದಿಹರೆಯದವರಿಗೆ ಪ್ಯಾರಸಿಟಮಾಲ್ ಅಥವಾ ನೋವು ನಿವಾರಕಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಸ್ಪಷ್ಟಪಡಿಸಿದೆ.

ಇದಲ್ಲದೆ, ರೋಗಲಕ್ಷಣಗಳು ಪ್ರಾರಂಭವಾದ 72 ಗಂಟೆಗಳ ಒಳಗೆ ‘ಅಧಿಕ ರಕ್ತದೊತ್ತಡ, ಮಧುಮೇಹಿಗಳು, ರೋಗನಿರೋಧಕ ಔಷಧವನ್ನು ಸೇವಿಸುವ ಜನರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಕೋವಿಡ್‌ನಿಂದ ಹೆಚ್ಚಿನ ಅಪಾಯದ ಗುಂಪಿನಲ್ಲಿರುವ ರೋಗಿಗಳಿಗೆ ಪ್ಯಾರಸಿಟಮಾಲ್ ನೀಡಬಹುದು’ಎಂದು ಅವರು ಹೇಳಿದ್ದಾರೆ.

‘ನಾವು ನಿರಂತರವಾಗಿ ವಿಕಸನಗೊಳ್ಳುವ ಹೊಸ ರೋಗವನ್ನು ಹೊಂದಿರುವಾಗ, ಹೊಸ ಚಿಕಿತ್ಸಾ ವಿಧಾನಗಳು ಸಹ ಬರುತ್ತವೆ. ಹೆಚ್ಚು ದುರ್ಬಲ ಜನರನ್ನು ಗುರುತಿಸುವುದು ಮತ್ತು ಅದಕ್ಕೆ ಅನುಗುಣವಾಗಿ ಔಷಧಿಗಳನ್ನು ಶಿಫಾರಸು ಮಾಡುವುದು ವೈದ್ಯರಿಗೆ ಬಿಟ್ಟದ್ದು’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT