ಗುರುವಾರ , ಮಾರ್ಚ್ 30, 2023
24 °C

ಸಿಧು ವಿದ್ಯುತ್‌ ಬಿಲ್‌ ಬಾಕಿ ₹8 ಲಕ್ಷ: ಸಿಎಂ ಅಮರಿಂದರ್‌ ವಿರುದ್ಧ ಅಕಾಲಿದಳ ಕಿಡಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಮೃತಸರ: ಕ್ಯಾಪ್ಟನ್‌ ಸಾಹೇಬರೇ...ಮೊದಲು ನಿಮ್ಮ ಪಕ್ಷದ ನಾಯಕರು ಬಾಕಿ ಉಳಿಸಿಕೊಂಡಿರುವ ₹ 8 ಲಕ್ಷ ವಿದ್ಯುತ್‌ ಬಿಲ್‌  ಪಾವತಿ ಮಾಡಿ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರಿಗೆ ವಿರೋಧ ಪಕ್ಷ ಶಿರೋಮಣಿ ಅಕಾಲಿದಳದ ನಾಯಕರು ಅಗ್ರಹಿಸಿದ್ದಾರೆ.

ಮಾಜಿ ಸಚಿವ, ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್‌ ನಾಯಕ ನವಜೋತ್ ಸಿಂಗ್ ಸಿಧು ಅವರು ಸುಮಾರು 8 ಲಕ್ಷ ರೂಪಾಯಿ ಮೊತ್ತದ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ವಿರೋಧ ಪಕ್ಷ ಶಿರೋಮಣಿ ಅಕಾಲಿದಳ ಟ್ವೀಟ್‌ ಮಾಡಿ, ಕ್ಯಾಪ್ಟನ್‌ ಸಾಹೇಬರೇ, ರಾಜ್ಯದಲ್ಲಿ ವಿದ್ಯುತ್‌ ಸಮಸ್ಯೆ ಪರಿಹರಿಸಲು ನಿಮ್ಮಿಂದ ಸಾಧ್ಯವಾಗಿಲ್ಲ, ನೀವು ಸ್ವಲ್ಪ ಬಿಡುವು ಮಾಡಿಕೊಂಡು ನಿಮ್ಮ ಶಾಸಕರ ಬಾಕಿ ಮೊತ್ತವನ್ನು ಪಾವತಿಸಲು ಗಮನಹರಿಸಿ ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದೆ. ಈ ಟ್ವೀಟ್‌ ಅನ್ನು ಕಾಂಗ್ರೆಸ್‌ ನಾಯಕರಿಗೂ ಟ್ಯಾಗ್‌ ಮಾಡಲಾಗಿದೆ.

ಪಂಜಾಬ್‌ನಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದ್ದು ರಾಜ್ಯದ ಹಲವು ಭಾಗಗಳಲ್ಲಿ ಲೋಡ್‌ ಶೆಡ್ಡಿಂಗ್‌ ಜಾರಿ ಮಾಡಲಾಗಿದೆ. ವಿದ್ಯುತ್‌ ಬಿಲ್‌ ಬಾಕಿ ಇರುವ ಗ್ರಾಹಕರು ಕೂಡಲೇ ಬಿಲ್‌ ಪಾವತಿಸುವಂತೆ ಪಂಜಾಬ್‌ ಸರ್ಕಾರ ಗ್ರಾಹಕರಲ್ಲಿ ಮನವಿ ಮಾಡುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷದ ಶಾಸಕರಾಗಿರುವ ಸಿಧು ಅವರು ₹ 8 ಲಕ್ಷ ಬಾಕಿ ಉಳಿಸಿಕೊಂಡಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ ಎಂದು ಕಾಂಗ್ರೆಸ್‌ನ ಬಲ್ಲಮೂಲಗಳು ತಿಳಿಸಿವೆ.

ಸಿಎಂ ಅಮರಿಂದರ್‌ ಸಿಂಗ್‌ ವಿರುದ್ಧ ಅಸಮಾಧಾನಗೊಂಡಿರುವ ಸಿಧು ಇತ್ತೀಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಭೇಟಿಯಾಗಿ ತಮ್ಮಗೆ ಪಕ್ಷದಲ್ಲಿನ ಜವಾಬ್ದಾರಿ ಹಾಗೂ ಸ್ಥಾನ ಮಾನಗಳ ಕುರಿತು ಶೀಘ್ರದಲ್ಲೇ ಪ್ರಕಟಿಸುವಂತೆ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು