ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷಕ್ಕೆ ದೇಶದಲ್ಲಿ ಮೆಟ್ರೊ ಮಾರ್ಗ 900 ಕಿ.ಮೀಗೆ ಏರಿಕೆ: ಹರ್ದೀಪ್ ಸಿಂಗ್

Last Updated 18 ಸೆಪ್ಟೆಂಬರ್ 2021, 9:55 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ವಿವಿಧ ನಗರಗಳಲ್ಲಿ ಪ್ರಸ್ತುತ ಸುಮಾರು 740 ಕಿ.ಮೀ ಮೆಟ್ರೊ ಮಾರ್ಗಗಳು ಕಾರ್ಯನಿರ್ವಹಿಸುತ್ತಿವೆ. 2022ರ ವೇಳೆಗೆ ಈ ವ್ಯಾಪ್ತಿಯು ಸುಮಾರು 900 ಕಿ.ಮೀಗೆ ವಿಸ್ತರಣೆಯಾಲಿದೆ’ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಶನಿವಾರ ತಿಳಿಸಿದರು.

ದೆಹಲಿ ಮೆಟ್ರೊದ ‘ಗ್ರೇ ಲೈನ್‌’ ಭಾಗವಾಗಿರುವ ಸುಮಾರು 1 ಕಿ.ಮೀ ಉದ್ದದ ನಜಾಫ್‌ಗಡ– ಧಂಸಾ ಬಸ್‌ ನಿಲ್ದಾಣವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ವಿವಿಧೆಡೆ 1,000 ಕಿ.ಮೀ ಮೆಟ್ರೊ ಮಾರ್ಗ ನಿರ್ಮಾಣ ಹಂತದಲ್ಲಿದೆ. ಬರುವ ವರ್ಷಗಳಲ್ಲಿ ಮಾರ್ಗದ ವ್ಯಾಪ್ತಿಯು 2,000 ಕಿ.ಮೀಗೆ ಹತ್ತಿರವಾಗಲಿದೆ’ ಎಂದು ಅವರು ತಿಳಿಸಿದರು.

‘ಕೋವಿಡ್‌ ಸಮಯದಲ್ಲಿ ದೆಹಲಿ ಮೆಟ್ರೊ ಕೈಗೊಂಡ ಕೆಲಸಗಳನ್ನು ಶ್ಲಾಘಿಸಿದ ಅವರು, ರಾಷ್ಟ್ರ ರಾಜಧಾನಿ ದೆಹಲಿಗೆ ಲಂಡನ್ ಮತ್ತು ನ್ಯೂಯಾರ್ಕ್‌ನಂತಹ ವಿಶ್ವದರ್ಜೆಯ ನಗರವಾಗುವ ಸಾಮರ್ಥ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT