ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮ ಸಚಿವ ಸಂಪುಟ ಸಹೋದ್ಯೋಗಿ ನೃತ್ಯ ಶ್ಲಾಘಿಸಿದ ಪ್ರಧಾನಿ ಮೋದಿ

Last Updated 30 ಸೆಪ್ಟೆಂಬರ್ 2021, 16:09 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅರುಣಾಚಲ ಪ್ರದೇಶದ ಗ್ರಾಮವೊಂದರಲ್ಲಿ ತಮ್ಮ ಕಾಲುಗಳನ್ನು ಅಲುಗಾಡಿಸುವ ನೃತ್ಯವೊಂದನ್ನುಪೋಸ್ಟ್‌ ಮಾಡಿದ ಸಚಿವ ಕಿರಣ್‌ ರಿಜಿಜು ಅವರ ನೃತ್ಯ ಕೌಶಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶ್ಲಾಘಿಸಿದ್ದಾರೆ.

ವಿವೇಕಾನಂದ ಕೇಂದ್ರ ವಿದ್ಯಾಲಯ ಯೋಜನೆಗಳ ಮೇಲ್ವಿಚಾರಣೆಗಾಗಿ ಕಿರಣ್‌ ರಿಜಿಜು ಅವರು ಕಜಲಾಂಗ್‌ ಗ್ರಾಮಕ್ಕೆ ಭೇಟಿ ನೀಡಿದ ವಿಡಿಯೊವೊಂದನ್ನು ಕಳೆದ ರಾತ್ರಿ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಜನರೊಂದಿಗೆ ಸಚಿವರ ನೃತ್ಯದ ವಿಡಿಯೊವನ್ನು ಅರುಣಾಚಲ ಪ್ರದೇಶದ ಸಂಸದರು ಟ್ಯಾಗ್‌ ಮಾಡಿದ್ದಾರೆ. ‘ಅತಿಥಿಗಳು ತಮ್ಮ ಗ್ರಾಮಕ್ಕೆ ಭೇಟಿ ನೀಡಿದಾಗ ಸಾಜೋಲಾಂಗ್‌ ಜನರು ಮಾಡುವ ಜಾನಪದ ನೃತ್ಯ ಇದು’ ಎಂದು ಹೇಳಿದ್ದಾರೆ.

ವಿಡಿಯೊ ಕುರಿತು ಪ್ರತಿಕ್ರಿಯಿರುವ ಪ್ರಧಾನಿ ಮೋದಿ, ‘ನಮ್ಮ ಕಾನೂನು ಸಚಿವರಾದ ಕಿರಣ್‌ ರಿಜಿಜು ಅವರೂ ಸಹ ಯೋಗ್ಯ ನೃತ್ಯಪಟು. ಅರುಣಾಚಲ ಪ್ರದೇಶದ ರೋಮಾಂಚಕ ಮತ್ತು ವೈಭವದ ಸಂಸ್ಕೃತಿಯನ್ನು ನೋಡಲು ಆನಂದವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT