ಸೋಮವಾರ, ಜನವರಿ 24, 2022
21 °C

ಓವೈಸಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ: ಬಿಜೆಪಿ ಮುಖಂಡ

ಐಎಎನ್‍ಎಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಮತ್ತೊಬ್ಬ ಮೊಹಮ್ಮದ್ ಅಲಿ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಹಾಗೂ ಉತ್ತರ ಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬ್ರತ್ ಪಾಠಕ್ ಹೇಳಿದ್ದಾರೆ. 

ಸುದ್ದಿ ಸಂಸ್ಥೆ 'ಐಎಎನ್‌ಎಸ್‌'ಗೆ ವಿಶೇಷ ಸಂದರ್ಶನ ನೀಡಿದ ಕನೌಜ್ ಲೋಕಸಭಾ ಕ್ಷೇತ್ರದ ಸಂಸದ ಪಾಠಕ್, ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರನ್ನು ಜನರು ಮೆಚ್ಚಿದ್ದು, ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.  

'ಆಯೇಗಾ ತೋ ಯೋಗಿ ಹೈ' (ಯೋಗಿ ಮಾತ್ರ ಬರುತ್ತಾರೆ). ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಎರಡನೇ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ ಎಂದು ಹೇಳಿದರು. 

ಉತ್ತರ ಪ್ರದೇಶದಲ್ಲಿ ಸ್ಪರ್ಧಿಸುವುದಾಗಿ ಓವೈಸಿ ಹೇಳಿದ್ದು, ಎನ್‌ಆರ್‌ಸಿ ಹಾಗೂ ಸಿಎಎ ರದ್ದುಗೊಳಿಸಲು ಒತ್ತಾಯಿಸಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಠಕ್, 'ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಪಕ್ಷಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ. ಅವರು (ಓವೈಸಿ) ರಾಷ್ಟ್ರೀಯ ಪಕ್ಷವಾಗಿಸಲು ಯತ್ನಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಅವರನ್ನು ಸ್ವಾಗಿಸುತ್ತೇನೆ. ಅವರು ಮತಾಂಧತೆಯನ್ನು ಯುಪಿಯಲ್ಲೂ ಹರಡಿ ಮತ್ತೊಬ್ಬ ಜಿನ್ನಾ ಆಗಲು ಯತ್ನಿಸುತ್ತಿದ್ದಾರೆ. ದೇಶ ವಿಭಜನೆಯ ಏಕೈಕ ಅಜೆಂಡಾವನ್ನು ಹೊಂದಿದ್ದಾರೆ. ಆದರೆ ಅವರ ಅಜೆಂಡಾವನ್ನು ನಿರ್ನಾಮ ಮಾಡುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದರು. 

ಬಿಜೆಪಿ ಹಿಂದುತ್ವದ ವಿಷಯವನ್ನು ಎತ್ತದಿದ್ದರೆ ಮತ್ತೆ ಯಾರು ಎತ್ತುತ್ತಾರೆ ಎಂದು ಪಾಠಕ್ ಪ್ರಶ್ನಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು