ಭಾನುವಾರ, ಮೇ 22, 2022
21 °C

ಜಮ್ಮು ಕಾಶ್ಮೀರ: ಗಡಿ ನುಸುಳಲು ಯತ್ನಿಸಿದ ಪಾಕಿಸ್ತಾನ ಪ್ರಜೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂಬಾ (ಜಮ್ಮು ಕಾಶ್ಮೀರ): ಇಲ್ಲಿರುವ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಗಡಿ ನುಸುಳಲು ಯತ್ನಿಸಿದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಭಾನುವಾರ ಬಂಧಿಸಿದ್ದಾರೆ.

ಬಿಎಸ್‌ಎಫ್‌ ಯೋಧರು ಅಂತರರಾಷ್ಟ್ರೀಯ ಗಡಿರೇಖೆ ಮತ್ತು ಗಡಿ ಭದ್ರತಾ ಬೇಲಿಯ ನಡುವೆ ಮುಂಜಾನೆ 2 ಗಂಟೆ ವೇಳೆ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದಾಗ ಅಕ್ರಮವಾಗಿ ದೇಶದೊಳಗೆ ನುಸುಳುತ್ತಿದ್ದ ವ್ಯಕ್ತಿಯನ್ನು ಹಿಡಿದಿದ್ದಾರೆ.

ನುಸುಳುಕೋರನ ವಿಚಾರಣೆ ಮುಂದುವರಿದಿದೆ.

ಜಿಲ್ಲೆಯ ರಾಮ್‌ಗರ್‌ ಪ್ರದೇಶದಲ್ಲಿ ಪಾಕಿಸ್ತಾನದಿಂದ ಭಾರತದತ್ತ ನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ, ಬಿಎ‌ಎಫ್‌‌ ಯೋಧರ ಗುಂಡಿಗೆ ಮಂಗಳವಾರ ಬಲಿಯಾಗಿದ್ದ. ʼನುಸುಳುಕೋರರು ಸೇನೆಯ ಎಚ್ಚರಿಕೆಯನ್ನು ಪದೇಪದೆ ಕಡೆಗಣಿಸುತ್ತಿದ್ದಾರೆ. ರಾಮ್‌ಗರ್‌ನ ಮಲ್ಲುಛಕ್‌ ಪೋಸ್ಟ್‌ ಬಳಿ ನುಸುಳುಕೋರನೊಬ್ಬನನ್ನು ಬಿಎಸ್‌ಎಫ್‌ ಹೊಡೆದುರುಳಿಸಿದೆʼ ಎಂದು ಮೂಲಗಳು ತಿಳಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು