ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಧುರನ್ನು ಸಂಪುಟದಲ್ಲಿ ಮುಂದುವರಿಸಲು ಪಾಕ್‌ನಿಂದ ಸಂದೇಶ ಬಂದಿತ್ತು: ಅಮರಿಂದರ್‌

Last Updated 24 ಜನವರಿ 2022, 14:36 IST
ಅಕ್ಷರ ಗಾತ್ರ

ಚಂಡೀಗಡ: ‘ನವಜೋತ್ ಸಿಂಗ್ ಸಿಧು ಅವರನ್ನು ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳಬೇಕು’ ಎಂದು ಕೋರಿ ನನಗೆ ಪಾಕಿಸ್ತಾನದಿಂದ ಸಂದೇಶವೊಂದು ಬಂದಿತ್ತು ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಸೋಮವಾರ ಹೇಳಿದ್ದಾರೆ.

ಕಾಂಗ್ರೆಸ್ ತೊರೆದ ನಂತರ ಹೊಸ ಪಕ್ಷವನ್ನು ಕಟ್ಟಿರುವ ಅಮರಿಂದರ್‌ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿದಿದ್ದಾರೆ. ಸಿಧು ಅವರನ್ನು ಸರ್ಕಾರದಲ್ಲಿ ಇರಿಸಿಕೊಂಡರೆ ಪಾಕ್‌ ಪ್ರಧಾನಿ ಕೃತಜ್ಞರಾಗಿರುವುದಾಗಿ ತಮಗೆ ಸಂದೇಶ ಬಂದಿದ್ದಾಗಿ ಅಮರಿಂದರ್‌ ತಿಳಿಸಿದ್ದಾರೆ.

‘ಸಿಧು ಅವರನ್ನು ಸರ್ಕಾರದಿಂದ ಕೈಬಿಟ್ಟ ನಂತರ, ಪಾಕಿಸ್ತಾನದಿಂದ ಸಂದೇಶವೊಂದು ಬಂದಿತ್ತು. ‘ಸಿಧು ಪಾಕಿಸ್ತಾನ ಪ್ರಧಾನಿಯ ಹಳೆಯ ಸ್ನೇಹಿತ. ನೀವು ಅವರನ್ನು ಸರ್ಕಾರದಲ್ಲಿ ಇರಿಸಿಕೊಳ್ಳಲು ಸಾಧ್ಯವಾದರೆ ಪ್ರಧಾನಿ ಕೃತಜ್ಞರಾಗಿರುತ್ತಾರೆ. ಅವರು (ಸಿಧು) ಕೆಲಸ ಮಾಡದಿದ್ದರೆ, ನಂತರ ನೀವು ತೆಗೆದುಹಾಕಬಹುದು’ ಎಂದು ನನಗೆ ಮನವಿ ಮಾಡಲಾಯಿತು’ ಎಂದು ಅವರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಮರಿಂದರ್‌ ಸಿಂಗ್‌ ಹೇಳಿದರು.

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಧು ಅವರನ್ನು ಪಂಜಾಬ್ ಸರ್ಕಾರದಿಂದ ಅಮರಿಂದರ್‌ ಕೈಬಿಟ್ಟದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT