ಶನಿವಾರ, ಮಾರ್ಚ್ 25, 2023
28 °C

ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ ತಯಾರಿಕೆಗೆ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ‘ಸ್ಪುಟ್ನಿಕ್‌ ವಿ’ ಲಸಿಕೆ ತಯಾರಿಸಲು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ಅನುಮತಿ ನೀಡಿದೆ.

ಪನೇಸಿಯಾ ಬಯೊಟೆಕ್‌ ಸೋಮವಾರ ಈ ವಿಷಯ ಪ್ರಕಟಿಸಿದೆ.

‘ಭಾರತದಲ್ಲಿ ಸ್ಪುಟ್ನಿಕ್‌ ವಿ ಲಸಿಕೆ ತಯಾರಿಸಲು ಅನುಮತಿ ದೊರೆತಿದೆ. ಲಸಿಕೆ ತಯಾರಿಕೆಗೆ ತ್ವರಿತವಾಗಿ ಎಲ್ಲ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೃತಜ್ಞತೆಗಳು’ ಎಂದು ಪನೇಸಿಯಾ ಬಯೊಟೆಕ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಜೈನ್‌ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಬದ್ದಿಯಲ್ಲಿ  ಪನೇಸಿಯಾ ಬಯೊಟೆಕ್‌ ಕೇಂದ್ರದಲ್ಲಿ ತಯಾರಿಸಿದ ಲಸಿಕೆಯನ್ನು ಗುಣಮಟ್ಟದ ಪರೀಕ್ಷೆಗಾಗಿ ರಷ್ಯಾದ ಗಮಲೆಯಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಗುಣಮಟ್ಟಕ್ಕೆ ಸಂಬಂಧಿಸಿದ ಎಲ್ಲ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ವುಟ್ನಿಕ್‌ ವಿ ಅನ್ನು ಭಾರತದಲ್ಲಿ ತುರ್ತು ಬಳಕೆಯ ಮಾನ್ಯತೆಗಾಗಿ 2021ರ ಏಪ್ರಿಲ್‌ 12ರಂದು ನೋಂದಣಿ ಮಾಡಲಾಗಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು