ಜಮ್ಮು–ಕಾಶ್ಮೀರ: ಪಿಡಿಪಿ ಮುಖಂಡ ನಯೀಮ್ ಅಖ್ತರ್ ಬಿಡುಗಡೆ

ಶ್ರೀನಗರ: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹಬಂಧನದಲ್ಲಿದ್ದ ಪಿಡಿಪಿ ಮುಖಂಡ ನಯೀಮ್ ಅಖ್ತರ್ ಅವರನ್ನು ಬಿಡುಗಡೆ ಮಾಡಲಾಗಿದೆ.
‘407 ದಿನಗಳ ಬಂಧನದ ನಂತರ ನಾನು ಬಂಧಮುಕ್ತನಾಗಿದ್ದೇನೆ. ನಮ್ಮ ನೆಲದಲ್ಲಿ ದೊಡ್ಡ ದುರಂತವನ್ನೇ ಉಂಟುಮಾಡುತ್ತಿರುವ ಆಡಳಿತಾಧಿಕಾರಿಗಳು ಸಣ್ಣ ಕರುಣೆ ತೋರಿದ್ದಕ್ಕೆ ಧನ್ಯವಾದಗಳು’ ಎಂದು ವ್ಯಂಗ್ಯವಾಗಿ ಅಖ್ತರ್ ಅವರು ಗುರುವಾರ ಟ್ವೀಟ್ ಮಾಡಿದ್ದಾರೆ.
ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಕಳೆದ ಆಗಸ್ಟ್ 5 ರಿಂದ ಅವರನ್ನು ಗೃಹಬಂಧನದಲ್ಲಿರಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.