ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಸಂಘಟನೆಗೆ ಪಿಡಿಪಿ ಯುವ ಮುಖಂಡನ ನೆರವು –ಎನ್‌ಐಎ

Last Updated 28 ಮಾರ್ಚ್ 2021, 11:43 IST
ಅಕ್ಷರ ಗಾತ್ರ

ನವದೆಹಲಿ: ಪಿಡಿಪಿಯ ಯುವ ಮುಖಂಡ ವಾಹಿದ್‌ ಉರ್ ರೆಹಮಾನ್‌ ಪರ‍್ರಾ ಅವರು ಉಗ್ರರ ಗುಂಪುಗಳಿಗೆ ಹಣಕಾಸು ನೆರವು ಮತ್ತು ಗನ್ ಪೂರೈಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಎನ್ಐಎ ಆರೋಪಿಸಿದೆ.

ಈ ಪ್ರಕ್ರಿಯೆಯು ಪಾಕಿಸ್ತಾನ ಮೂಲದ ಉಗ್ರರ ಸಂಘಟನೆಯು, ಜಮ್ಮು ಮತ್ತು ಕಾಶ್ಮೀರ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಕಾರ್ಯತಂತ್ರದ ಭಾಗವಾಗಿದೆ ಎಂದು ಎನ್ಐಎ ತಿಳಿಸಿದೆ.

ಪ್ರಕರಣ ಸಂಬಂಧ ಜಮ್ಮುವಿನ ಕೋರ್ಟ್‌ನಲ್ಲಿ ಈಚೆಗೆ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಪೊಲೀಸ್‌ ಡಿವೈಎಸ್ಪಿ ದೇವೇಂದರ್ ಸಿಂಗ್ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.

ಗುಂಪಿನ ಈ ಚಟುವಟಿಕೆಯು 2010ರಿಂದಲೂ ನಡೆಯುತ್ತಿದ್ದು, 20 ರಿಂದ 25ಜನರ ಗುಂಪು ರಚಿಸಿದ್ದು, ಪ್ರತಿಭಟನೆ ವೇಳೆ ಈ ಗುಂಪು ಕಲ್ಲು ತೂರಾಟ ಕೃತ್ಯಗಳಲ್ಲಿ ಭಾಗಿಯಾಗುತ್ತಿತ್ತು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT