ಬುಧವಾರ, ಡಿಸೆಂಬರ್ 8, 2021
23 °C

ಪೆಟ್ರೋಲ್, ಡೀಸೆಲ್ ದರ ಏರಿಕೆ: ಬೆಂಗಳೂರಿನಲ್ಲಿ ₹ 100 ಗಡಿ ದಾಟಿದ ಡೀಸೆಲ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಭಾನುವಾರ ಲೀಟರಿಗೆ 35 ಪೈಸೆಯಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಡೀಸೆಲ್ ದರವು ಲೀಟರಿಗೆ 100ರ ಗಡಿ ದಾಟಿರುವ ನಗರಗಳ ಸಾಲಿಗೆ ಬೆಂಗಳೂರು ಸಹ ಸೇರಿಕೊಂಡಿದೆ. ಬೆಂಗಳೂರಿನಲ್ಲಿ ಡೀಸೆಲ್ ದರ ಲೀಟರಿಗೆ 100.32ಕ್ಕೆ ಏರಿಕೆ ಆಗಿದೆ. ಪೆಟ್ರೋಲ್ ದರ ಲೀಟರಿಗೆ 109.47ಕ್ಕೆ ತಲುಪಿದೆ.

ಭಾನುವಾರದ ದರ ಏರಿಕೆಯ ನಂತರ ಪೆಟ್ರೋಲ್, ಡೀಸೆಲ್ ದರವು ವಿಮಾನ ಇಂಧನ ದರಕ್ಕಿಂತಲೂ ಶೇ 30ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ವಿಮಾನ ಇಂಧನ ದರ ಕಿಲೋ ಲೀಟರಿಗೆ ₹ 79 ಇದೆ. ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 105.84ಕ್ಕೆ ಮತ್ತು ಡೀಸೆಲ್ ದರ ಲೀಟರಿಗೆ ₹ 94.57ಕ್ಕೆ ಏರಿಕೆ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ₹ 111.77 ಮತ್ತು ಡೀಸೆಲ್ ದರ ₹ 102.52ರಷ್ಟಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು