ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಮಗ್ಗ ಸ್ಟಾರ್ಟಪ್ ಸವಾಲಿನಲ್ಲಿ ಭಾಗಿಯಾಗಲು ಯುವಕರಿಗೆ ಪ್ರಧಾನಿ ಕರೆ

Last Updated 7 ಆಗಸ್ಟ್ 2022, 12:48 IST
ಅಕ್ಷರ ಗಾತ್ರ

ನವದೆಹಲಿ:ಕೈಮಗ್ಗ ಸ್ಟಾರ್ಟಪ್ ಮಹಾನ್‌ ಸವಾಲಿನಲ್ಲಿ ಭಾಗವಹಿಸುವಂತೆ ಯುವಜನತೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕಲ್ಪನೆ ಮತ್ತು ಆವಿಷ್ಕಾರ ವಿಚಾರದಲ್ಲಿ ನೇಕಾರರಿಗೆ ಲಭ್ಯವಾದ ಅತ್ಯುತ್ತಮ ಅವಕಾಶ ಇದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಕೈಮಗ್ಗ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ನಮ್ಮ ಕಲಾತ್ಮಕ ಸಂಪ್ರದಾಯ ಆಚರಣೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಗೌರವ ಸಲ್ಲಿಸುವುದರೊಂದಿಗೆ ಯುವಜನತೆಯನ್ನು ಕೈಮಗ್ಗ ಕ್ಷೇತ್ರದತ್ತ ಬರುವಂತೆ ಆಹ್ವಾನಿಸಿದರು.

ಕೈಮಗ್ಗಸ್ಟಾರ್ಟಪ್ ಗ್ರ್ಯಾಂಡ್ ಚಾಲೆಂಜ್‌ನಲ್ಲಿ ಭಾಗವಹಿಸುವಂತೆ ಕರೆ ನೀಡಿ ಜವಳಿ ಖಾತೆ ಸಚಿವ ಪಿಯೂಷ್‌ ಗೋಯಲ್‌ ಅವರು ಟ್ವೀಟ್‌ ಮಾಡಿದ್ದರು. ಇದರಲ್ಲಿಪ್ರಧಾನಿ ಮೋದಿ ಅವರನ್ನು ಟ್ಯಾಗ್‌ ಮಾಡಿದ್ದರು. ಇದನ್ನು ಮರುಟ್ವೀಟ್‌ ಮಾಡಿದ ಪ್ರಧಾನಿ ಮೋದಿ ಕೈಮಗ್ಗ ಸ್ಟಾರ್ಟಪ್‌ ಚಾಲೆಂಜ್‌ನಲ್ಲಿ ಭಾಗವಹಿಸುವಂತೆ ಯುವಜನತೆಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT