ಶನಿವಾರ, ಜುಲೈ 2, 2022
25 °C

ಮೋದಿ–ಬೋರಿಸ್ ಭೇಟಿ: ಭಾರತದಲ್ಲಿ ಯುದ್ಧ ವಿಮಾನ ತಯಾರಿಕೆಗೆ ಬ್ರಿಟನ್ ಸಹಕಾರ ಭರವಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶೀಯವಾಗಿ ಯುದ್ಧ ವಿಮಾನಗಳ ತಯಾರಿಕೆ, ರಕ್ಷಣಾ ಸಾಮಗ್ರಿಗಳ ಕ್ಷಿಪ್ರ ಪೂರೈಕೆ ಸೇರಿದಂತೆ ರಕ್ಷಣಾ ವ್ಯವಸ್ಥೆಯಲ್ಲಿ ಭಾರತಕ್ಕೆ ಸಹಕಾರ ನೀಡಲು ಬ್ರಿಟನ್‌ ಮುಂದಾಗಿದೆ. ಪ್ರಸ್ತುತ ಭಾರತಕ್ಕೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ರಷ್ಯಾದಿಂದ ಪೂರೈಕೆಯಾಗುತ್ತಿದೆ.

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಸುದೀರ್ಘ ಮಾತುಕತೆ ನಡೆಸಿದರು. ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ.

ಹಿಂದೂ ಮಹಾಸಾಗರದಲ್ಲಿ ಅಪಾಯಗಳನ್ನು ಎದುರಿಸಲು ಅಗತ್ಯವಿರುವ ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಬ್ರಿಟಿಷ್‌ ಹೈ ಕಮಿಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಷಿಪ್ರಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಣೆಗೆ ಅನುವಾಗುವ ನಿಟ್ಟಿನಲ್ಲಿ ಭಾರತಕ್ಕೆ ಬ್ರಿಟನ್‌ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿ (ಒಜಿಇಎಲ್‌) ಒದಗಿಸುವುದಾಗಿ ತಿಳಿಸಿದೆ. ಇದರಿಂದಾಗಿ ರಕ್ಷಣಾ ಸಾಮಗ್ರಿಗಳ ಪೂರೈಕೆ ಅವಧಿ ಕಡಿತಗೊಳ್ಳಲಿದೆ.

ಇದನ್ನೂ ಓದಿ–

ರಷ್ಯಾ–ಉಕ್ರೇನ್‌ ಸಂಘರ್ಷದ ಹಿನ್ನೆಲೆಯಲ್ಲಿ ಬೋರಿಸ್‌ ಜಾನ್ಸನ್‌ ಅವರು ಭಾರತದಲ್ಲಿ ಗುರುವಾರದಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

'ಬಿರುಗಾಳಿ ಎದ್ದಿರುವ ಸಾಗರಗಳಿಗೆ ಬ್ರಿಟನ್‌ ಮತ್ತು ಭಾರತದ ಪಾಲುದಾರಿಕೆಯು ದೀಪಸ್ತಂಭವಾಗಿ ತೋರುತ್ತಿದೆ' ಎಂದು ಪ್ರಧಾನಿ ಬೋರಿಸ್‌ ಹೇಳಿರುವುದಾಗಿ ಹೈ ಕಮಿಷನ್‌ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

'ಹವಾಮಾನ ಬದಲಾವಣೆಯಿಂದ ಹಿಡಿದು ಇಂಧನ, ಭದ್ರತೆ ಹಾಗೂ ರಕ್ಷಣಾ ವಲಯಗಳಲ್ಲಿ ನಮ್ಮ ಪಾಲುದಾರಿಗೆ ಉಭಯ ರಾಷ್ಟ್ರಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ' ಎಂದು ಬೋರಿಸ್‌ ಹೇಳಿದ್ದಾರೆ.

ಇದನ್ನೂ ಓದಿ–

'ಗೆಳೆಯ ನಿಮ್ಮನ್ನು ಭಾರತದಲ್ಲಿ ಕಂಡು ಪುಳಕಿತನಾಗಿರುವೆ...' ಎಂದು ಪ್ರಧಾನಿ ಮೋದಿ ಅವರು ಬೋರಿಸ್‌ ಅವರನ್ನು ಭೇಟಿಯಾದ ಚಿತ್ರದೊಂದಿ ಟ್ವೀಟಿಸಿದ್ದಾರೆ.

ಮೋದಿ ಅವರೊಂದಿಗೆ ಮಾತುಕತೆಗೂ ಮುನ್ನ ವಿದೇಶಾಂಗ ಸಚಿವ ಎಸ್‌.ಜಯಶಂಕರ್‌ ಅವರೊಂದಿಗೆ ಬೋರಿಸ್‌ ಮಾತುಕತೆ ನಡೆಸಿದರು. 2030ರ ವರೆಗೂ ಭಾರತ–ಬ್ರಿಟನ್‌ನ ಪಾಲುದಾರಿಕೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಿದರು.

ಇದನ್ನೂ ಓದಿ–

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು