ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದಶಕದ ಕೊನೆಯಲ್ಲಿ ದೇಶದಲ್ಲಿ 6ಜಿ ನೆಟ್‌ವರ್ಕ್: ಪ್ರಧಾನಿ ಮೋದಿ

Last Updated 17 ಮೇ 2022, 10:12 IST
ಅಕ್ಷರ ಗಾತ್ರ

ನವದೆಹಲಿ: ಈ ದಶಕದ ಅಂತ್ಯದ ಒಳಗಾಗಿ ದೇಶದಲ್ಲಿ 6ಜಿ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಅದರಿಂದಾಗಿ ಅತಿ ವೇಗದ ಅಂತರ್ಜಾಲ ಸೇವೆ ಲಭ್ಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸದ್ಯ ದೇಶದಲ್ಲಿ 3ಜಿ ಹಾಗೂ 4ಜಿ ನೆಟ್‌ವರ್ಕ್‌ ಸೇವೆ ಚಾಲ್ತಿಯಲ್ಲಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ 5ಜಿ ಸೇವೆ ಸಹ ಲಭ್ಯವಾಗಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ಮೋದಿ, 5ಜಿ ನೆಟ್‌ವರ್ಕ್ ಸೇವೆಗೆ ಚಾಲನೆಯಿಂದ ದೇಶದ ಆರ್ಥಿಕತೆಗೆ 45,000 ಕೋಟಿ ಡಾಲರ್ (ಅಂದಾಜು ₹34,89,885) ಆದಾಯ ದೊರೆಯಲಿದೆ ಎಂದು ಹೇಳಿದರು.

‘ಇದು ಕೇವಲ ಇಂಟರ್‌ನೆಟ್ ಸೇವೆಯ ವೇಗ ಹೆಚ್ಚಿಸುವುದಕ್ಕೆ ಸಂಬಂಧಿಸಿದ್ದಲ್ಲ. ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ವಿಚಾರವೂ ಆಗಿದೆ. 5ಜಿ ತಂತ್ರಜ್ಞಾನ ಅಳವಡಿಕೆಯಿಂದ ದೇಶದ ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ಜೀವನ ನಿರ್ವಹಣೆ ಮತ್ತು ಉದ್ಯೋಗ ಸುಗಮವಾಗಲಿದೆ’ ಎಂದು ಮೋದಿ ಅಭಿಪ್ರಾಯಪಟ್ಟರು.

ಕೃಷಿ, ಆರೋಗ್ಯ, ಶಿಕ್ಷಣ, ಸರಕು ಸಾಗಣೆ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೂ ಉತ್ತೇಜನ ದೊರೆಯಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT