ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದ ಮುಖ್ಯಾಂಶಗಳು ಇಲ್ಲಿವೆ;

*ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿವಸ. ಆ ದಿನದಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

*ಯಾವುದೇ ರಾಜ್ಯಸರ್ಕಾರಗಳಿಗೆ ಲಸಿಕಾಕರಣಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಿಲ್ಲ.

ಓದಿ:ಕೇಂದ್ರದಿಂದ ಉಚಿತ ಕೋವಿಡ್ ಲಸಿಕೆ, ಖರೀದಿಸಲೂ ಇದೆ ಅವಕಾಶ: ಪ್ರಧಾನಿ ಮೋದಿ

* ದೇಶದ ಎಲ್ಲ ಜನರಿಗೆ ಕೇಂದ್ರಸರ್ಕಾರವೇ ಉಚಿತವಾಗಿ ಲಸಿಕೆಯನ್ನು ನೀಡಲಿದೆ

*ಉಚಿತ ಲಸಿಕೆ ಬೇಡ ಎಂದುಕೊಂಡವರಿಗೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗಾಗಿ ಅಂಥವರಿಗಾಗಿಯೇ ಖಾಸಗಿ ಆಸ್ಪತ್ರೆಗಳಿಗೂ ಶೇ.25 ಲಸಿಕೆಗಳನ್ನು ಒದಗಿಸಲಾಗುತ್ತದೆ.

ಓದಿ:LIVE | 80 ಕೋಟಿ ಮಂದಿಗೆ ಉಚಿತ ಪಡಿತರ ಯೋಜನೆ ಮುಂದುವರಿಕೆ: ಪ್ರಧಾನಿ ಮೋದಿ ಘೋಷಣೆ

*ಅವರು ಗರಿಷ್ಠ 150 ರೂ. ಸೇವಾ ಶುಲ್ಕ ತೆಗೆದುಕೊಂಡು, ಲಸಿಕೆಯನ್ನು ನೀಡಬಹುದು.

*ಹಿಂದಿನ ವರ್ಷ ಕೊರೊನಾ ಕಾರಣದಿಂದ ಲಾಕ್‌ಡೌನ್ ಮಾಡಲಾಗಿತ್ತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 80 ಕೋಟಿ ಮಂದಿಗೆ ಉಚಿರ ರೇಷನ್ ಒದಗಿಸಲಾಗಿತ್ತು.

*ಈ ವರ್ಷವೂ ಮೇ ಹಾಗೂ ಜೂನ್ ತಿಂಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ.

*ಈ ಯೋಜನೆಯು ದೀಪಾವಳಿವರೆಗೂ ಮುಂದುವರಿಯಲಿದೆ.

*ಪ್ರತಿಯೊಬ್ಬ ಬಡ ನಾಗರಿಕರ ಜತೆಗೆ ಸರ್ಕಾರವೂ ಇದೆ. ನವೆಂಬರ್‌ವರೆಗೆ ಎಲ್ಲ 80 ಕೋಟಿ ಮಂದಿಗೆ, ಉಚಿತವಾಗಿ ಧಾನ್ಯ ವಿತರಿಸಲಾಗುತ್ತದೆ.

*ವಿಶ್ವಾಸೇನ ಸಿದ್ಧಿ: ವಿಶ್ವಾಸದಿಂದಲೇ ಸಿದ್ಧಿ ಎಂಬ ಭಾರತದ ಮೂಲಮಂತ್ರಕ್ಕೆ ಪೂರಕವಾಗಿ, 23 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಭಾರತದಂತಹಾ ವಿಶಾಲ ದೇಶದಲ್ಲಿ ಇದೊಂದು ಬಲು ದೊಡ್ಡ ಸಾಧನೆ.

*ಭಾರತದಲ್ಲಿ ಲಸಿಕೆ ತಯಾರಿಸುವ ಕಂಪನಿಗಳಿಗೆ ಎಲ್ಲ ರೀತಿಯಲ್ಲೂ ಸರ್ಕಾರವು ನೆರವು ನೀಡಿ, ಭುಜಕ್ಕೆ ಭುಜ ಕೊಟ್ಟು ಗಟ್ಟಿಯಾಗಿ ನಿಂತಿದೆ.

*ಇಂದು, ದೇಶಗಳಲ್ಲಿ 7 ಕಂಪನಿಗಳು ವಿಭಿನ್ನ ರೀತಿಯ ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಿವೆ.

*ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗಳಿಗೆ ವೇಗ ನೀಡಲಾಗಿದೆ.

*ಮೂಗಿನ ಮೂಲಕಸಿಂಪಡಿಸಲಾಗುವ ಲಸಿಕೆಯ ಪ್ರಯೋಗವೂ ನಡೆಯುತ್ತಿದೆ.

*ಇದಕ್ಕೆ ಯಶಸ್ಸು ಸಿಕ್ಕಿದರೆ, ಭಾರತದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗುತ್ತದೆ.

*ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ತಯಾರಿಸುವುದು ಇಡೀ ಮಾನವ ಕುಲಕ್ಕೆ ಬಲು ದೊಡ್ಡ ಉಪಯೋಗ.

*ಇದೀಗ ಮೂರನೇ ಅಲೆಯ ಆತಂಕವಿರುವುದರಿಂದಾಗಿ, ಮಕ್ಕಳಿಗಾಗಿ ಎರಡು ಲಸಿಕೆಗಳ ಪ್ರಯೋಗವೂ ವೇಗವಾಗಿ ನಡೆಯುತ್ತಿದೆ.

*ಭಾರತದಲ್ಲಿ ಲಸಿಕೆ ಬಗ್ಗೆ ಕಾರ್ಯಕ್ರಮ ಆರಂಭವಾದಂದಿನಿಂದಲೇ ಕೆಲವು ಮಂದಿ ಜನ ಸಾಮಾನ್ಯರ ಮನಸ್ಸಿನಲ್ಲಿ ಶಂಕೆಯ ಬೀಜ ಬಿತ್ತುವ ಕೆಲಸ ಮಾಡಿದರು.

*ಭಾರತದ ಲಸಿಕೆ ಬಂದಾಗ, ಅದರ ಬಗ್ಗೆ ಶಂಕೆ ಮತ್ತಷ್ಟು ಹೆಚ್ಚುವಂತೆ ಮಾಡಲಾಯಿತು.

*ಇದನ್ನೆಲ್ಲಾ ದೇಶವೇ ನೋಡುತ್ತಿದೆ.

*ಲಸಿಕೆ ಬಗ್ಗೆ ಶಂಕೆ ಹುಟ್ಟಿಸಿಹಾಕಿದವರು ಅವರು ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡಿದರು. ಅಂಥವರಿಂದ ದೂರವಿರಿ.

*ಸಮಾಜದ ಪ್ರಬುದ್ಧ, ಯುವ ಜನರಲ್ಲಿ ಮನವಿ ಏನೆಂದರೆ, ಲಸಿಕೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರ ನೀಡಿ.

*ಕೆಲವು ಕಡೆಗಳಲ್ಲಿ ಕೊರೊನಾ ಕರ್ಫ್ಯೂ ಸಡಿಲಿಸಲಾಗುತ್ತಿದೆ. ಆದರೆ, ಕೊರೊನಾ ಓಡಿ ಹೋಗಿದೆ ಎಂದು ತಿಳಿಯಬೇಕಿಲ್ಲ. ಎಚ್ಚರಿಕೆ ವಹಿಸಲೇಬೇಕು.

*ನಾವೆಲ್ಲರೂ ಕೊರೊನಾ ವಿರುದ್ಧದ ಈ ಯುದ್ಧವನ್ನು ಜಯಿಸುತ್ತೇವೆ, ಭಾರತವು ಕೊರೊನಾ ವಿರುದ್ಧ ಜಯಿಸುತ್ತದೆ. ಎಲ್ಲರಿಗೂ ಶುಭವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.