ಬುಧವಾರ, ಜನವರಿ 19, 2022
28 °C
ವರ್ಷದ ಕೊನೆಯ ‘ಮನ್‌ ಕಿ ಬಾತ್‌‘ನಲ್ಲಿ ಭಾಷಣ

ವಿಶ್ವದರ್ಜೆಯ ಉತ್ಪನ್ನಗಳನ್ನು ತಯಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವ ‘ವೋಕಲ್ ಫಾರ್ ಲೋಕಲ್‌‘ ಆಂದೋಲನಕ್ಕೆ ಸಾರ್ವಜನಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಕೈಗಾರಿಕೋದ್ಯಮಿಗಳು, ವಾಣಿಜ್ಯ ಉದ್ಯಮಿಗಳು ದೇಶದಲ್ಲಿ ವಿಶ್ವಮಟ್ಟದ ಉತ್ಪನ್ನಗಳನ್ನು ತಯಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಈ ವರ್ಷದ ಕೊನೆಯ ‘ಮನ್‌ ಕಿ ಬಾತ್‌‘ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷದ ಕೊನೆಯಲ್ಲೂ ಸಮಾಜದಲ್ಲಿ ‘ಆತ್ಮನಿರ್ಭರ ಭಾರತ‘ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಬೆಳೆಯುವ ಕೇಸರಿಯನ್ನು ಜನರು ಹೆಚ್ಚು ಬಳಸುವ ಮೂಲಕ, ಅದನ್ನು ‘ಜಾಗತಿಕಮಟ್ಟದಲ್ಲಿ ಜನಪ್ರಿಯ ಬ್ರ್ಯಾಂಡ್‌‘ ಮಾಡಬೇಕೆಂದು ಮೋದಿ ಕರೆ ನೀಡಿದರು. ‘ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಈಗಾಗಲೇ ಕೇಸರಿಗೆ ಭೌಗೋಳಿಕ ಗುರುತಿಸುವಿಕೆ(ಜಿಐ ಟ್ಯಾಗ್‌) ಸ್ಥಾನ ನೀಡಿದೆ‘ ಎಂದು ಹೇಳಿದರು.

‘ಏಕ ಬಳಕೆಯ ಪ್ಲಾಸ್ಟಿಕ್‌ ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಹೊಸ ವರ್ಷದಲ್ಲಿ ಈ ಸಮಸ್ಯೆಯನ್ನು ಕೊನೆಗಾಣಿಸಲು ಯೋಜನೆ ರೂಪಿಸಬೇಕಿದೆ‘ ಎಂದು ಮೋದಿ ಹೇಳಿದರು.

ತಮ್ಮ ಭಾಷಣದಲ್ಲಿ ಗುರು ಗೋವಿಂದ್ ಸಿಂಗ್ ಸೇರಿದಂತೆ,  ಕೆಲವು ಸಿಖ್‌ ಸಮುದಾಯದ ಸಂತರನ್ನು ಸ್ಮರಿಸಿದ ಮೋದಿಯವರು, ‘ಅವರ ತ್ಯಾಗ ನಮ್ಮ ಸಂಸ್ಕೃತಿಯನ್ನು ಸುರಕ್ಷಿತವಾಗಿಟ್ಟಿದೆ‘ ಎಂದು ಹೇಳಿದರು.

‘ನಾವು ಧೈರ್ಯ ಶಾಲಿ ಚಾರ್‌ಶಾಹಿಬಾಝ್ಡೆ ಅವರಿಗೆ ಗೌರವ ಸಲ್ಲಿಸುತ್ತೇವೆ. ಮಾತಾ ಗುಜ್ರಿ ಅವರನ್ನು ನೆನೆಯುತ್ತೇವೆ. ಗುರು ತೇಜ್‌ ಬಹದ್ದೂರ್‌ ಜಿ ಹಾಗೂ ಗುರುಗೋವಿಂದ್‌ ಸಿಂಗ್‌ ಜಿ ಅವರ ಶ್ರೇಷ್ಠತೆಯನ್ನು ನೆನೆಯುತ್ತೇವೆ. ಅವರ ತ್ಯಾಗ, ಸ್ಪೂರ್ತಿ ಮತ್ತು ಸಹಾನುಭೂತಿಯ ಮನೋಭಾವಕ್ಕಾಗಿ ಅವರಿಗೆ ಋಣಿಯಾಗಿದ್ದೇವೆ‘ ಎಂದು ಮೋದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು