ಬುಧವಾರ, ಜನವರಿ 20, 2021
21 °C
ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ ದತ್ತಾಂಶದಲ್ಲಿ ಮಾಹಿತಿ

2 ವರ್ಷದಲ್ಲಿ 20 ಸಾವಿರ ಪೊಲೀಸರ ವರ್ಗ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2019ರಲ್ಲಿ ದೇಶದಲ್ಲಿ 20,637 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆಗೊಂಡ ಎರಡು ವರ್ಷದೊಳಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡವರಲ್ಲಿ ಶೇ 70ರಷ್ಟು ಮಂದಿ ಠಾಣಾಧಿಕಾರಿಗಳೇ (ಎಸ್‌ಎಚ್‌ಒ) ಇದ್ದಾರೆ. 

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ (ಬಿಪಿಆರ್‌ಡಿ) ದತ್ತಾಂಶಗಳು ಈ ಮಾಹಿತಿ ನೀಡಿವೆ. 2020ರ ಜನವರಿ 1ರವರೆಗಿನ ಮಾಹಿತಿಗಳು ಇದರಲ್ಲಿವೆ.

ಠಾಣಾಧಿಕಾರಿಗಳು, ಉಪ ಪೊಲೀಸ್ ವರಿಷ್ಠಾಧಿಕಾರಿಗಳು (ಡಿವೈಎಸ್‌ಪಿ), ಸಹಾಯಕ ಆಯುಕ್ತರು (ಎಸಿಪಿ), ಜಿಲ್ಲಾ ಎಸ್‌ಪಿ, ಡೆಪ್ಯುಟಿ ಕಮಿಷನರ್ (ಡಿಸಿಪಿ), ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ), ಇನ್ಸ್‌ಪೆಕ್ಟರ್ ಜನರಲ್ ಆಫ್ ರೇಂಜ್ (ಐಜಿ ಶ್ರೇಣಿ), ಹೆಚ್ಚುವರಿ ಸಿಪಿ ಮತ್ತು ಪೋಲಿಸ್ ಕಮಿಷನರ್‌ಗಳನ್ನು ನಿಯುಕ್ತಿಗೊಳಿಸಿದ ಒಂದು ಅಥವಾ ಎರಡು ವರ್ಷಗಳ ನಡುವೆ ವರ್ಗಾವಣೆ ಮಾಡಲಾಗಿದೆ.

ಬಿಪಿಆರ್‌ಡಿ ಅಂಕಿ–ಅಂಶಗಳ ಪ್ರಕಾರ, ಒಂದು ವರ್ಷದೊಳಗೆ 12 ಮಂದಿ, ಎರಡು ವರ್ಷಗಳ ಒಳಗೆ ಇನ್ನೂ 12 ಮಂದಿ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಇಂತಹ ಆರು ವರ್ಗಾವಣೆಗಳು ತಮಿಳುನಾಡಿನಲ್ಲಿ ನಡೆದಿವೆ ಎಂದು ವರದಿ ಹೇಳಿದೆ.

ವರ್ಗಾವಣೆಯಾದವರ ಪೈಕಿ ಡೆಪ್ಯುಟಿ ಎಸ್‌ಪಿಗಳು ಮತ್ತು ಎಸಿಪಿಗಳು ಶೇ 20.90ರಷ್ಟು ಇದ್ದಾರೆ. ಈ ಪೈಕಿ ನಿಯುಕ್ತಿಗೊಂಡ ಒಂದು ವರ್ಷದೊಳಗೆ 2,424 ಮಂದಿ ಹಾಗೂ ಒಂದರಿಂದ ಎರಡು ವರ್ಷದೊಳಗೆ 1,891 ಮಂದಿ ವರ್ಗಾವಣೆ ಆಗಿದ್ದಾರೆ. ಮೊದಲ ವರ್ಷದಲ್ಲಿ ಅತಿಹೆಚ್ಚು ಮಂದಿ (525) ತಮಿಳುನಾಡಿನಲ್ಲಿ, ಒಂದು ಮತ್ತು ಎರಡು ವರ್ಷಗಳ ನಡುವಿನ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ (701) ಹೆಚ್ಚು ಮಂದಿ ಡೆಪ್ಯುಟಿ ಎಸ್‌ಪಿಗಳು ಮತ್ತು ಎಸಿಪಿಗಳು ವರ್ಗವಾಗಿದ್ದಾರೆ.

ಎಸ್‌ಪಿ ಮತ್ತು ಡಿಸಿಪಿ ಶ್ರೇಣಿಯಲ್ಲಿ ಮೊದಲ ವರ್ಷದಲ್ಲಿ 602 ಅಧಿಕಾರಿಗಳು, ಮೊದಲ ಮತ್ತು ಎರಡನೇ ವರ್ಷದ ನಡುವೆ
516 ಅಧಿಕಾರಿಗಳು ವರ್ಗವಾಗಿದ್ದು, ವರ್ಗಾವಣೆಯಾದವರ ಪೈಕಿ ಈ ಶ್ರೇಣಿಯವರ ಪ್ರಮಾಣ ಶೇ 5.41ರಷ್ಟು ಇದೆ. ತಮಿಳುನಾಡಿನಲ್ಲಿ 134,
ಮಹಾರಾಷ್ಟ್ರದಲ್ಲಿ 133 ಅಧಿಕಾರಿಗಳು ಸ್ಥಳ ಬದಲಾವಣೆಗೆ ಒಳಗಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು