ಸೋಮವಾರ, ಸೆಪ್ಟೆಂಬರ್ 20, 2021
20 °C

ರಾಜ್ಯಸಭೆಯ 11 ಸ್ಥಾನಗಳಿಗೆ ನವೆಂಬರ್ 9ರಂದು ಚುನಾವಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ತಿಂಗಳು ತೆರವಾಗಲಿರುವ ಉತ್ತರ ಪ್ರದೇಶದಲ್ಲಿನ 10, ಉತ್ತರಾಖಂಡ್‌ನ 1 ರಾಜ್ಯಸಭೆ ಸ್ಥಾನಗಳಿಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ.

ಚುನಾವಣಾ ಆಯೋಗ ಮಂಗಳವಾರ ಈ ತೀರ್ಮಾನ ಪ್ರಕಟಿಸಿದೆ.  ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ, ಸಮಾಜವಾದಿ ಪಕ್ಷದ ಮುಖಂಡ ರಾಮಗೋಪಾಲ್ ಯಾದವ್‌ ಸೇರಿದಂತೆ 10 ಸದಸ್ಯರು ನ. 25ರಂದು ನಿವೃತ್ತಿಯಾಗಲಿದ್ದಾರೆ. ಅದೇ ರೀತಿ ಉತ್ತರಾಖಂಡ್‌ನಿಂದ ಆಯ್ಕೆಯಾಗಿರುವ ನಟ ರಾಜ್‌ಬಬ್ಬರ್ ಅವರು ನಿವೃತ್ತರಾಗಲಿದ್ದಾರೆ.

ತೆರವಾಗಲಿರುವ ಈ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ. ಮತಎಣಿಕೆಯೂ ಅದೇ ದಿನ ಸಂಜೆ ನಡೆಯಲಿದೆ. ಈ ಚುನಾವಣೆ ಕುರಿತ ಅಧಿಸೂಚನೆ ಇದೇ 20ರಂದು ಹೊರಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು