ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸಂಪುಟ ಪುನರ್‌ರಚನೆ: ಯಾರಿಗೆ ಯಾವ ಖಾತೆ? ಇಲ್ಲಿದೆ ವಿವರ

Last Updated 7 ಜುಲೈ 2021, 20:26 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆ ಬಳಿಕ ಕೇಂದ್ರ ಸಚಿವ ಸಂಪುಟದ ಕ್ಯಾಬಿನೆಟ್ ದರ್ಜೆ ಸಚಿವರ ಖಾತೆಗಳ ವಿವರ ಇಂತಿದೆ.

1. ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೇಲ್ವಿಚಾರಣೆ ನಡೆಸಲಿದ್ದು, ಗೃಹ ಸಚಿವ ಅಮಿತ್ ಶಾ ಅವರು ಗೃಹ ಸಚಿವಾಲಯದ ಜೊತೆಗೆ ಸಹಕಾರ ಸಚಿವಾಲಯದ ಮೇಲ್ವಿಚಾರಣೆ ನಡೆಸಲಿದ್ದಾರೆ.

2. ಹರ್ದೀಪ್ ಸಿಂಗ್ ಪುರಿ- ನಗರ ಅಭಿವೃದ್ಧಿ, ವಸತಿ ಮತ್ತು ಪೆಟ್ರೋಲಿಯಂ ಸಚಿವಾಲಯ.

3. ಸ್ಮೃತಿ ಇರಾನಿ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆತೆ ಜೊತೆಗೆ ಸ್ವಚ್ಛಭಾರತ್ ಮಿಷನ್ ಅನ್ನು ಸಹ ನೋಡಿಕೊಳ್ಳುತ್ತಾರೆ.

4. ಪಿಯೂಷ್ ಗೋಯಲ್– ಜವಳಿ ಸಚಿವಾಲಯ ಮತ್ತು ಗ್ರಾಹಕ ಕಲ್ಯಾಣ ಸಚಿವಾಲಯದ ಜೊತೆಗೆ ವಾಣಿಜ್ಯ ಸಚಿವಾಲಯ ಖಾತೆ‌

5. ಅಶ್ವಿನಿ ವೈಷ್ಣವ್– ರೈಲ್ವೆ ಖಾತೆ ಜೊತೆಗೆ ಐಟಿ ಮತ್ತು ಸಂವಹನ ಖಾತೆ ನಿರ್ವಹಿಸಲಿದ್ದಾರೆ.

6.ಮನ್ಸುಖ್ ಮಾಂಡವಿಯಾ: ಆರೋಗ್ಯ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ

7. ಅನುರಾಗ್ ಠಾಕೂರ್– ಯುವ ವ್ಯವಹಾರಗಳ ಜೊತೆಗೆ ಮಾಹಿತಿ ಮತ್ತು ಪ್ರಸಾರ ಖಾತೆ

8. ಹರ್ದೀಪ್ ಸಿಂಗ್ ಪುರಿ ಅವರ ಬದಲಿಗೆ ಜ್ಯೋತಿರಾದಿತ್ಯ ಸಿಂಧಿಯಾ ನಾಗರಿಕ ವಿಮಾನಯಾನ ಖಾತೆ ನಿರ್ಹಿಸುತ್ತಾರೆ.

9. ರಾಮಚಂದ್ರ ಪ್ರಸಾದ್ ಸಿಂಗ್– ಉಕ್ಕು ಖಾತೆ

10. ಗಿರಿರಾಜ್ ಸಿಂಗ್– ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ

11. ವೀರೇಂದ್ರ ಕುಮಾರ್– ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

12. ಮುಕ್ತಾರ್ ಅಬ್ಬಾಸ್ ನಖ್ವಿ– ಅಲ್ಪಸಂಖ್ಯಾತ ವ್ಯವಹಾರ

13. ಸರ್ಬಾನಂದ ಸೋನೊವಾಲ್– ಬಂದರು, ಹಡಗು ಮತ್ತು ಜಲಮಾರ್ಗಗಳ ಖಾತೆ ಮತ್ತು ಆಯುಷ್ ಖಾತೆ

14. ನಾರಾಯಣ್ ಟಾಟು ರಾಣೆ– ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ

15. ಪ್ರಲ್ಹಾದ್ ಜೋಶಿ– ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ

16. ಧರ್ಮೇಂದ್ರ ಪ್ರಧಾನ್– ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ

17. ಪಶುಪತಿ ಕುಮಾರ್ ಪಾರಸ್– ಆಹಾರ ಸಂಸ್ಕರಣಾ ಕೈಗಾರಿಕೆಗಳ ಖಾತೆ

18. ಗಜೇಂದ್ರ ಸಿಂಗ್ ಶೇಖಾವತ್– ಜಲಶಕ್ತಿ

19. ಕಿರಣ್ ರಿಜಿಜು– ಕಾನೂನು ಮತ್ತು ನ್ಯಾಯ

20. ರಾಜ್ ಕುಮಾರ್ ಸಿಂಗ್– ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ

21. ಭೂಪೇಂದರ್ ಯಾದವ್– ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ

22. ಮಹೇಂದ್ರ ನಾಥ್ ಪಾಂಡೆ– ಭಾರಿ ಕೈಗಾರಿಕೆ

23. ಪುರುಷೋತ್ತಮ್ ರೂಪಾಲಾ– ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ

24. ಜಿ ಕಿಶನ್ ರೆಡ್ಡಿ– ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ

25. ನರೇಂದ್ರ ಸಿಂಗ್ ತೋಮರ್– ಕೃಷಿ ಮತ್ತು ರೈತ ಕಲ್ಯಾಣ

26. ನಿರ್ಮಲಾ ಸೀತಾರಾಮನ್– ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ

27. ನಿತಿನ್ ಗಡ್ಕರಿ– ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ

28. ಸುಬ್ರಹ್ಮಣ್ಯಂ ಜೈಶಂಕರ್– ವಿದೇಶಾಂಗ

29. ಅರ್ಜುನ್ ಮುಂಡಾ– ಬುಡಕಟ್ಟು ವ್ಯವಹಾರಗಳ ಖಾತೆ

30. ರಾಜನಾಥ್ ಸಿಂಗ್– ರಕ್ಷಣಾ ಖಾತೆ

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT