ಗುರುವಾರ , ಅಕ್ಟೋಬರ್ 29, 2020
26 °C
ಮಾಲಿನ್ಯ ಸೃಷ್ಟಿಸುವ ಪ್ರಮುಖ ತಾಣಗಳ ಪರಿವೀಕ್ಷಣೆಗೆ 50 ಸಿಪಿಸಿಬಿ ತಂಡಗಳ ರಚನೆ

ದೆಹಲಿ ಮಾಲಿನ್ಯಕ್ಕೆ ಕೃಷಿ ತ್ಯಾಜ್ಯ ಸುಡುವುದಷ್ಟೇ ಪ್ರಮುಖ ಕಾರಣವಲ್ಲ: ಜಾವಡೇಕರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚಳಿಗಾಲದಲ್ಲಿ ಮಾಲಿನ್ಯ ಉಂಟುಮಾಡುವಂತಹ ದೆಹಲಿ–ಎನ್‌ಸಿಆರ್ ಪ್ರದೇಶದ ಪ್ರಮುಖ ಸ್ಥಳಗಳ ಮೇಲೆ ನಿಗಾ ಇಡಲು ರಚಿಸಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ಪರಿವೀಕ್ಷಣಾ ತಂಡಗಳ ಕ್ಷೇತ್ರ ಕಾರ್ಯಾಚರಣೆಗೆ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೆಹಲಿ – ಎನ್‌ಸಿಆರ್‌ ಭಾಗದಲ್ಲಿ ಉಂಟಾಗುವ ವಾಯು ಮಾಲಿನ್ಯಕ್ಕೆ ಭತ್ತ, ಗೋಧಿಯಂತಹ ಬೆಳೆಗಳ ತ್ಯಾಜ್ಯವನ್ನು ಸುಡುವುದು ಪ್ರಮುಖ ಕಾರಣವಲ್ಲ. ಇದರ ಜತೆಗೆ ಹಲವು ಕಾರಣಗಳಿವೆ’ ಎಂದು ಜಾವಡೇಕರ್‌ ಸ್ಪಷ್ಟಪಡಿಸಿದರು.

‘ಬೆಳೆಯ ತ್ಯಾಜ್ಯ ಸುಡುವುದರಿಂದ ಶೇ 4ರಷ್ಟು ಮಾತ್ರ ವಾಯುಮಾಲಿನ್ಯ ಉಂಟಾಗುತ್ತಿದೆ. ಉಳಿದ ಶೇ 96ರಷ್ಟು ಮಾಲಿನ್ಯ ಸ್ಥಳೀಯ ಕಾರ್ಖಾನೆಗಳು ಸುಡುವ ಬಯೋಮಾಸ್‌(ಜೀವರಾಶಿ), ಕಸ ಸುರಿಯುವುದು, ರಸ್ತೆಗಳ ನಿರ್ಮಾಣ, ದೂಳು, ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಂದ ಉಂಟಾಗುತ್ತಿದೆ’ ಎಂದರು.

ಇತ್ತೀಚೆಗೆ ಪಂಜಾಬ್‌ನ ಲೂಧಿಯಾನಕ್ಕೆ ಭೇಟಿ ನೀಡಿದ್ದಾಗ, ಅಲ್ಲಿ ಬೆಳೆ ತ್ಯಾಜ್ಯ ಸುಡುತ್ತಿದ್ದ ಹೊಗೆಯಿಂದ ನನ್ನ ಗಂಟಲು ಕಟ್ಟಿ, ಉಸಿರುಗಟ್ಟಿದ್ದೆ ಎಂದು ಜಾವಡೇಕರ್ ನೆನಪಿಸಿಕೊಂಡರು. ’ಪಂಜಾಬ್ ಸರ್ಕಾರ ಈ ಬೆಳೆಯ ತ್ಯಾಜ್ಯವನ್ನು ಸುಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಹೇಳಿದರು.

ಇದಕ್ಕೂ ಮುನ್ನ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡಗಳ ನೋಡಲ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ’ಮಾಲಿನ್ಯ ಉಂಟುಮಾಡುವ ಪ್ರದೇಶಗಳಲ್ಲಿ ನೀವು ಮುಂದಿನ ಎರಡು ತಿಂಗಳು ಕೆಲಸ ಮಾಡುತ್ತೀರಿ. ಈ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳು ಮತ್ತು ದೂರುಗಳನ್ನು ಗಮನಿಸಿ. ಅವುಗಳಲ್ಲಿರುವ ಅಂಶಗಳನ್ನು ಪರಿವೀಕ್ಷಿಸಿ, ವರದಿ ಸಲ್ಲಿಸಿ. ತಪ್ಪಾಗಿದೆ ಎಂದು ಕಂಡು ಬಂದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಿಮಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು