ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ 'ರತ್ನ', ರಾಜಕೀಯ ಮುತ್ಸದ್ಧಿ ಪ್ರಣವ್ ಮುಖರ್ಜಿ ಇನ್ನಿಲ್ಲ

Last Updated 31 ಆಗಸ್ಟ್ 2020, 15:01 IST
ಅಕ್ಷರ ಗಾತ್ರ

ನವದೆಹಲಿ: ಭಾರತದಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣವ್‌ ಮುಖರ್ಜಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಮುಖರ್ಜಿ ಅವರು ನಿಧನರಾದ ಸಂಗತಿಯನ್ನು ಸ್ವತಃಅವರ ಪುತ್ರ ಅಭಿಜಿತ್‌ ಮುಖರ್ಜಿ ಅವರು ಸೋಮವಾರಟ್ವೀಟ್‌ ಮಾಡಿ ತಿಳಿಸಿದ್ದಾರೆ.

‘ಆರ್‌ಆರ್‌ ಆಸ್ಪತ್ರೆಯ ವೈದ್ಯರ ಅತ್ಯುತ್ತಮ ಪ್ರಯತ್ನಗಳು ಮತ್ತು ಭಾರತೀಯರ ಪ್ರಾರ್ಥನೆಗಳ ಹೊರತಾಗಿಯೂ ನನ್ನ ತಂದೆ ಪ್ರಣಬ್ ಮುಖರ್ಜಿ ಅವರು ನಿಧನರಾಗಿದ್ದಾರೆ ಎಂದು ಭಾರವಾದಹೃದಯದೊಂದಿಗೆ ನಿಮಗೆ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು,’ ಎಂದು ಅಭಿಜಿತ್‌ ಮುಖರ್ಜಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಿದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರತೆಗೆಯುವ ಸಲುವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲೆಂದು ಆಗಸ್ಟ್‌ 10ರಂದು ಪ್ರಣವ್‌ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಿಗೆ ಕೋವಿಡ್‌ ಇರುವುದು ಖಚಿತವಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಕೋಮಾಕ್ಕೆ ಜಾರಿದ್ದ ಪ್ರಣವ್‌ ಮುಖರ್ಜಿ ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿ ಪರಿಸ್ಥಿತಿ ವಿಷಮವಾಗಿತ್ತು. ಇಂದೂ ಕೂಡ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದ ಆಸ್ಪತ್ರೆ, ಪ್ರಣವ್‌ ಮುಖರ್ಜಿ ಅವರು ದೀರ್ಘ ಕೋಮಾ ಸ್ಥಿತಿಯಲ್ಲಿರುವುದಾಗಿ ಹೇಳಿತ್ತು.

ಮುಖರ್ಜಿ 2012 ರಿಂದ 2017 ರವರೆಗೆ ಭಾರತದ 13 ನೇ ರಾಷ್ಟ್ರಪತಿಗಳಾಗಿದ್ದರು.

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT