ಗುರುವಾರ , ಜನವರಿ 27, 2022
20 °C

ದೇಶದಲ್ಲಿ 1.59 ಲಕ್ಷ ಹೊಸ ಪ್ರಕರಣ; 224 ದಿನಗಳಲ್ಲೇ ಗರಿಷ್ಠ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ 24 ಗಂಟೆಗಳಲ್ಲಿ 1.59 ಲಕ್ಷ ಕೋವಿಡ್‌ ಪ್ರಕರಣ ದೃಢಪಟ್ಟಿದ್ದು, ಇದು 224 ದಿನಗಳಲ್ಲೇ ದಿನವೊಂದರ ಗರಿಷ್ಠ ಪ್ರಮಾಣವಾಗಿದೆ. ಈ ಪೈಕಿ 552 ಓಮೈಕ್ರಾನ್‌ ಪ್ರಕರಣಗಳಾಗಿವೆ. ಇದರೊಂದಿಗೆ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 3,623ಕ್ಕೆ ಏರಿದೆ.

ಓಮೈಕ್ರಾನ್‌ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿ (1,009) ಪತ್ತೆಯಾಗಿವೆ. ಉಳಿದಂತೆ ದೆಹಲಿ 513, ಕರ್ನಾಟಕ 441, ಕೇರಳ 33 ಮತ್ತು ಗುಜರಾತ್‌ನಲ್ಲಿ 204 ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,90,611ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ವಿವರ ನೀಡಿದೆ.

ಅಲ್ಲದೆ, ಮತ್ತೆ 327 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 4,83,790ಕ್ಕೆ ಏರಿದೆ. ಕಳೆದ ವರ್ಷ ಮೇ 29ರಂದು ಒಂದೇ ದಿನದಲ್ಲಿ 1,65,553 ಪ್ರಕರಣ ದೃಢಪಟ್ಟಿದ್ದು, ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು.

ದೇಶದಾದ್ಯಂತ ಸಕ್ರಿಯ ಪ್ರಕರಣಗಳ ಪ್ರಮಾಣ ಒಟ್ಟು ಪ್ರಕರಣಗಳ ಶೇ 1.66ರಷ್ಟಿದ್ದು, ವಾರದ ಅವಧಿಯ ದೃಢಪಡುವ ಪ್ರಮಾಣ ಶೇ 10.21ಕ್ಕೆ ಏರಿದೆ.

ಈವರೆಗೆ ಮಹಾರಾಷ್ಟ್ರದಲ್ಲಿ ಗರಿಷ್ಠ 1,41,627, ಕೇರಳ 49,547, ಕರ್ನಾಟಕದಲ್ಲಿ 36,843 ಜನರು ಮೃತಪಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು