ಲಂಡನ್ : ಖಾಲಿಸ್ತಾನ ಪರ ಬೆಂಬಲಿಗರ ಗುಂಪೊಂದು ಇಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್ ಬಳಿ ಶನಿವಾರ ಪ್ರತಿಭಟನೆ ನಡೆಸಿದೆ.
ಖಾಲಿಸ್ತಾನದ ಧ್ವಜ ಹಾಗೂ ಬ್ಯಾನರ್ ಹಿಡಿದಿದ್ದ ಪ್ರತಿಭಟನಕಾರರು ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಹಾಗೂ ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್ ಸಿಂಗ್‌ಗೆ ಬೆಂಬಲ ಸೂಚಿಸಿದ್ದಾರೆ.
‘ಸಹೋದರ ಅಮೃತ್‌ಪಾಲ್ ಹಾಗೂ ಸಿಖ್ ಸಮುದಾಯದ ಇತರ ಅಮಾಯಕ ಯುವಕರ ವಿರುದ್ಧ ಭಾರತದ ಪೊಲೀಸರು ಕೈಗೊಂಡಿರುವ ಕ್ರಮವು ತಾರತಮ್ಯದಿಂದ ಕೂಡಿದೆ. ಇದನ್ನು ನಾವು ಖಂಡಿಸುತ್ತೇವೆ’ ಎಂಬ ಬರಹವುಳ್ಳ ಬ್ಯಾನರ್‌ಗಳನ್ನು ಪ್ರತಿಭಟನಕಾರರು ಹಿಡಿದಿದ್ದರು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.