ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಉದ್ಯೋಗಿಗಳಿಗೆ ಬೋನಸ್‌ ನೀಡಲು ಕೇಂದ್ರ ಸರ್ಕಾರ ಅನುಮೋದನೆ

Last Updated 2 ಅಕ್ಟೋಬರ್ 2022, 13:59 IST
ಅಕ್ಷರ ಗಾತ್ರ

ನವದೆಹಲಿ: 2021-22ರ ಆರ್ಥಿಕ ವರ್ಷದಲ್ಲಿ ಗೆಜೆಟೆಡ್‌ ಅಲ್ಲದ ಅರ್ಹ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸರಿಸಮನಾದ ಉತ್ಪಾದಕತೆ ಸಂಬಂಧಿತ ಬೋನಸ್ (ಪ್ರೊಡಕ್ಟಿವಿಟಿ ಲಿಂಕ್ಡ್‌ ಬೋನಸ್‌– ಪಿಎಲ್‌ಬಿ) ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ನಿರ್ಧಾರದಿಂದ ಸುಮಾರು 11.27 ಲಕ್ಷ ನಾನ್‌ ಗೆಜೆಟೆಡ್‌ ರೈಲ್ವೆ ಉದ್ಯೋಗಿಗಳಿಗೆ ಪ್ರಯೋಜನ ಸಿಗುವ ಸಾಧ್ಯತೆಯಿದೆ. ಆದರೆ, ಈ ಸೌಲಭ್ಯ ಆರ್‌ಪಿಎಫ್, ಆರ್‌ಪಿಎಸ್‌ಎಫ್ ಸಿಬ್ಬಂದಿಗೆ ಅನ್ವಯಿಸದು ಎಂದು ರೈಲ್ವೆಯ ಹೇಳಿಕೆ ತಿಳಿಸಿದೆ.

ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಪಿಎಲ್‌ಬಿ ಪಾವತಿಸಲು ₹1,832.09 ಕೋಟಿ ಬೇಕಾಗಲಿದ್ದು, ಇದನ್ನು ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕಿದೆ. ನಿಗದಿಪಡಿಸಿದ ವೇತನ ಲೆಕ್ಕಾಚಾರದ ಮಿತಿಯಂತೆ ಕನಿಷ್ಠ ₹7,000ದಿಂದ ಗರಿಷ್ಠ ₹17,951ಪಿಎಲ್‌ಬಿ ಪಾವತಿಸಬೇಕಾಗುತ್ತದೆ. ದಸರೆ/ ಆಯುಧ ಪೂಜೆಗೂ ಮುನ್ನವೇ ಪಿಎಲ್‌ಬಿ ಉದ್ಯೋಗಿಗೆ ಪಾವತಿಯಾಗಲಿದೆ.

‘78 ದಿನಗಳ ಉತ್ಪಾದಕತೆ ಸಂಬಂಧಿತ ಬೋನಸ್ ಮಂಜೂರು ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆಇಡೀ ರೈಲ್ವೆ ಪರಿವಾರದ ಪರವಾಗಿ ಧನ್ಯವಾದಗಳು’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT