ಮಂಗಳವಾರ, ನವೆಂಬರ್ 24, 2020
22 °C

ಆರ್‌ಜಿಸಿಬಿ ನಿರ್ದೇಶಕರಾಗಿ ಪ್ರೊ.ಚಂದ್ರಭಾಸ ನಾರಾಯಣ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಇಲ್ಲಿನ ರಾಜೀವ್‌ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ (ಆರ್‌ಜಿಸಿಬಿ) ನಿರ್ದೇಶಕ ಸ್ಥಾನಕ್ಕೆ ಬೆಂಗಳೂರಿನ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಮುಖ್ಯಸ್ಥ ಪ್ರೊ.ಚಂದ್ರಭಾಸ ನಾರಾಯಣ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಮಾಲಿಕ್ಯುಲರ್ ಬಯಾಲಜಿ ಮತ್ತು ಬಯೋಟೆಕ್‌ ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಆರ್‌ಜಿಸಿಬಿಯು ದೇಶದ ಮುಂಚೂಣಿ ಸಂಸ್ಥೆಯಾಗಿದೆ. ಪ್ರೊ.ಎಂ.ರಾಧಾಕೃಷ್ಣ ಪಿಳ್ಳೆ ಅವರಿಂದ ತೆರವಾದ ಸ್ಥಾನಕ್ಕೆ ಚಂದ್ರಭಾಸ ಅವರನ್ನು ನೇಮಕ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದೆ ಎಂದು ಪ್ರಕಟಣೆ ತಿಳಿಸಿದೆ. 

ಭೌತವಿಜ್ಞಾನಿಯಾಗಿರುವ ಪ್ರೊ.ನಾರಾಯಣ ಅವರು ಜೆಎನ್‌ಸಿಎಎಸ್‌ಆರ್‌ ಸೇರಿದ ನಂತರ ಜೀವವಿಜ್ಞಾನದಲ್ಲಿ ತಮ್ಮ ಹೆಚ್ಚಿನ ಸಂಶೋಧನೆ ಕೈಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.