ಸೋಮವಾರ, ನವೆಂಬರ್ 28, 2022
20 °C

ಜಿಂದಾಲ್‌ ವಿರುದ್ಧದ ಎಫ್‌ಐಆರ್‌ ದೆಹಲಿ ಪೊಲೀಸರಿಗೆ ವರ್ಗಾಯಿಸಲು ‘ಸುಪ್ರೀಂ’ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿಯ ಉಚ್ಚಾಟಿತ ಮುಖಂಡ ನವೀನ್ ಕುಮಾರ್‌ ಜಿಂದಾಲ್ ಅವರ ವಿರುದ್ಧ ದೇಶದಾದ್ಯಂತ ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಎಂ.ಎಂ. ಸುಂದ್ರೇಶ್‌ ಅವರಿದ್ದ ಪೀಠ, ದೆಹಲಿ ಪೊಲೀಸರು ತನಿಖೆ ಮುಕ್ತಾಯಗೊಳ್ಳುವವರೆಗೆ ನವೀನ್‌ ಕುಮಾರ್‌ ಜಿಂದಾಲ್ ಅವರಿಗೆ ಮಧ್ಯಂತರ ರಕ್ಷಣೆಯನ್ನೂ ವಿಸ್ತರಿಸಿದೆ.

ಪ್ರವಾದಿಯವರನ್ನು ಅವಹೇಳನ ಮಾಡಿದ ಆರೋಪಗಳ ಸಂಬಂಧ ಜಿಂದಾಲ್‌ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳ ರದ್ದತಿ ಕೋರಿ ದೆಹಲಿ ಹೈಕೋರ್ಟ್‌ ಮೊರೆ ಹೋಗಲು ಪೀಠ ಅನುಮತಿಸಿತು. ಅಲ್ಲದೆ, ಭವಿಷ್ಯದಲ್ಲಿ ಈ ವಿಚಾರ ಸಂಬಂಧ ದಾಖಲಾಗುವ ಎಫ್‌ಐಆರ್‌ಗಳನ್ನೂ ತನಿಖೆಗಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸುವುದಾಗಿ ಪೀಠ ಹೇಳಿತು.

ಎಲ್ಲ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್ ಐಎಫ್‌ಎಸ್‌ಒ ಘಟಕಕ್ಕೆ ವರ್ಗಾಯಿಸಬೇಕು. ಎಂಟು ವಾರಗಳವರೆಗೆ ಆರೋಪಿ ವಿರುದ್ಧ ಯಾವುದೇ ಕ್ರಮ ಅಥವಾ ಹೆಚ್ಚಿನ ಎಫ್‌ಐಆರ್ ದಾಖಲಾಗದಿದ್ದರೆ, ದೆಹಲಿ ಹೈಕೋರ್ಟ್‌ನಲ್ಲಿ ಪರಿಹಾರ ಪಡೆಯಬಹುದು ಎಂದು ಪೀಠ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು