ಮಂಗಳವಾರ, ಜೂನ್ 15, 2021
23 °C

Exit Poll: ಪುದುಚೇರಿಯಲ್ಲೂ ಅರಳಲಿದೆ ಕಮಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುದುಚೇರಿ: 30 ಕ್ಷೇತ್ರಗಳ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲೂ ಕಮಲ ಅರಳಲಿದೆ ಎನ್ನುತ್ತಿವೆ ಚುನಾವಣೋತ್ತರ ಸಮೀಕ್ಷೆಗಳು. 

ಇಲ್ಲಿ ಅಧಕಾರಕ್ಕೆ ಬರಲು ಯಾವುದೇ ಪಕ್ಷಕ್ಕೆ 16 ಸ್ಥಾನಗಳ ಅಗತ್ಯವಿದೆ. ಬಿಜೆಪಿ ಮತ್ತು ಆಲ್ ಇಂಡಿಯಾ ಎನ್‌.ಆರ್ ಕಾಂಗ್ರೆಸ್ ಒಳಗೊಂಡ ಎಮ್‌ಡಿಎ ಮೈತ್ರಿಯು 16–20 ಸ್ಥಾನಗಳನ್ನು ಗೆಲ್ಲಬಹುದು ಎಂದು ರಿಪಬ್ಲಿಕ್ ಮತ್ತು ಸಿಎನ್‌ಎಕ್ಸ್ ಸಮೀಕ್ಷೆ ಭವಿಷ್ಯ ನುಡಿದಿದೆ. ಕಾಂಗ್ರೆಸ್ ನೇತೃತ್ವದ ಎಸ್‌ಡಿಎ ಮೈತ್ರಿಯು 11–13 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನುತ್ತಿದೆ ಸಮೀಕ್ಷೆ.

ಆಕ್ಸಿಸ್ ಮೈಇಂಡಿಯಾ ಸಮೀಕ್ಷೆಯು ಬಿಜೆಪಿಗೆ 22 ಮತ್ತು ಕಾಂಗ್ರೆಸ್‌ಗೆ 8 ಸ್ಥಾನ ನಿಡಿದೆ.

ಸಿ–ವೋಟರ್ ಸಮೀಕ್ಷೆಯೂ ಸಹ  ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 22 ಮತ್ತು ಕಾಂಗ್ರೆಸ್ ಮೈತ್ರಿಗೆ 8 ಸ್ಥಾನ ಕೊಟ್ಟಿದೆ.

ಇದನ್ನೂ ಓದಿ.. Exit Poll: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರಕ್ಕೆ, ಬಿಜೆಪಿ ಪ್ರಬಲ ಪೈಪೋಟಿ
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು