ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಬೆಂಗಳೂರಿನ ಕೆಡೆಟ್‌ ಸಾವು

Last Updated 10 ಫೆಬ್ರುವರಿ 2022, 2:26 IST
ಅಕ್ಷರ ಗಾತ್ರ

ಮುಂಬೈ: ಪುಣೆಯ ಖಡಕವಾಸಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಬೆಂಗಳೂರು ಮೂಲದ ವಿದ್ಯಾರ್ಥಿ (ಕೆಡೆಟ್‌) ಸಾವಿಗೀಡಾಗಿದ್ದಾನೆ.

ಮೃತಪಟ್ಟಿರುವ ಕೆಡೆಟ್‌ ಅನ್ನು 18 ವರ್ಷ ವಯಸ್ಸಿನ ಜಿ.ಪ್ರತ್ಯುಶ್ ಎಂದು ಗುರುತಿಸಲಾಗಿದೆ. 147ನೇ ಕೋರ್ಸ್‌ನ ಭಾಗವಾಗಿ ಫೆಬ್ರುವರಿ 7ರಂದು ಆತ ಎನ್‌ಡಿಎಗೆ ಸೇರ್ಪಡೆಯಾಗಿದ್ದನು.

ಎನ್‌ಡಿಎಗೆ ಸೇರಿದ್ದ ಮಾರನೆಯ ದಿನ, ಫೆಬ್ರುವರಿ 8ರಂದು ಪ್ರತ್ಯುಶ್‌ ತನ್ನ ಕೋಣೆಯಲ್ಲಿ ಕುಸಿದು ಬಿದ್ದಿದ್ದಾನೆ. ಆತನನ್ನು ಬದುಕುಳಿಸಲು ನಡೆಸಿದ ಯಾವ ಪ್ರಯತ್ನಗಳೂ ಫಲ ನೀಡಲಿಲ್ಲ.

'ಸಾವಿನ ಕಾರಣ ತಿಳಿಯಲು ಶವ ಪರೀಕ್ಷೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ' ಎಂದು ಪುಣೆ ಮೂಲದ ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಪ್ರತ್ಯುಶ್‌ನ ಪಾಲಕರಿಗೆ ಸಾವಿನ ವಿಚಾರ ತಲುಪಿಸಲಾಗಿದ್ದು, ಪೊಲೀಸರಿಗೆ ಘಟನೆಯ ವಿವರ ನೀಡಲಾಗಿದೆ. ಬುಧವಾರ ಮೃತ ಕೆಡೆಟ್‌ಗೆ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT