‘ಮಿಟೂ’ ಪ್ರಕರಣದಿಂದ ಬಚಾವಾಗಲು ಚನ್ನಿಗೆ ನೆರವಾದದ್ದಕ್ಕೆ ವಿಷಾದವಿದೆ: ಅಮರಿಂದರ್
ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹಿಂದೆ ‘ಮಿಟೂ (#MeToo)’ ಆರೋಪ ಎದುರಿಸಿದ್ದರು. ಆಗ ಅವರಿಗೆ ಅದರಿಂದ ಬಚಾವಾಗಲು ನೆರವಾಗಿದ್ದಕ್ಕೆ ವಿಷಾದವಿದೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಆಗ ಸಚಿವರಾಗಿದ್ದ ಚನ್ನಿ ತಮ್ಮ ಕಾಲಿಗೆರಗಿ, ಜೀವನ ಪರ್ಯಂತ ನಿಮಗೆ ನಿಷ್ಠರಾಗಿರುತ್ತೇನೆ ಎಂದು ಹೇಳಿದ್ದರು ಎಂದೂ ಅಮರಿಂದರ್ ಸಿಂಗ್ ಹೇಳಿದ್ದಾರೆ.
‘ಈಗ ಅವರು (ಚನ್ನಿ) ಬಣ್ಣ ಬದಲಿಸಿದ್ದಾರೆ. ಎರಡು ವರ್ಷಗಳಿಂದ ನನ್ನನ್ನು ದೂರ ಮಾಡಲು ಯತ್ನಿಸುತ್ತಿದ್ದರು ಎನ್ನುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
UP Elections: ಒಬಿಸಿ ಪಲ್ಲಟ- ಬಿಜೆಪಿ ‘ಹಿಂದುತ್ವ’ ಆಟ
ಪ್ರಧಾನಿ ನರೇಂದ್ರ ಮೋದಿಗೆ ಉಂಟಾಗಿದ್ದ ಭದ್ರತಾ ಲೋಪ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಚನ್ನಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚನ್ನಿ ಸರ್ಕಾರದ ಸೂಚನೆಯಂತೆಯೇ ಪೊಲೀಸರು ಪ್ರತಿಭಟನಾನಿರತ ರೈತರನ್ನು ರಸ್ತೆಯಿಂದ ತೆರವುಗೊಳಿಸಿರಲಿಲ್ಲ. ಹೀಗಾಗಿ ಪ್ರಧಾನಿಯವರು ಅಲ್ಲಿ ಸಿಲುಕಿಹಾಕಿಕೊಳ್ಳುವಂತಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.