ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2008ರ ಭೂಮಿ ಖರೀದಿ ಅಕ್ರಮದ ಬಗ್ಗೆ ತನಿಖೆ: ಪಂಜಾಬ್ ಕೃಷಿ ಸಚಿವ

Last Updated 28 ನವೆಂಬರ್ 2022, 3:18 IST
ಅಕ್ಷರ ಗಾತ್ರ

ಚಂಡೀಗಡ:ಅಮೃತಸರದಲ್ಲಿರುವ ಅಂತರರಾಷ್ಟ್ರೀಯ ಗಡಿ ಬಳಿ ಬಿತ್ತನೆ ಬೀಜ ಕೇಂದ್ರ ತೆರೆಯುವ ಸಲುವಾಗಿ 2008ರಲ್ಲಿ ₹ 32 ಕೋಟಿಗೆ ಭೂಮಿ ಖರೀದಿಸಲಾಗಿದೆ. ಇದರಲ್ಲಿ ಅಕ್ರಮ ನಡೆದಿರುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದೆ ಎಂದು ಪಂಜಾಬ್‌ ಕೃಷಿ ಸಚಿವ ಕುಲದೀಪ್‌ ಸಿಂಗ್‌ ಧಲಿವಾಲ್‌ಹೇಳಿದ್ದಾರೆ.

'ಪ್ರಕಾಶ್‌ ಸಿಂಗ್ ಬಾದಲ್‌ ಸರ್ಕಾರದ ಅವಧಿಯಲ್ಲಿ ಸುಚಾ ಸಿಂಗ್‌ ಲಂಘಾಹ್‌ ಕೃಷಿ ಸಚಿವರಾಗಿದ್ದರು. ಪಹಾನ್‌ ಸಿಂಗ್‌ ಪನ್ನು ಅವರು ಅಮೃತಸರ ಜಿಲ್ಲೆಯ ಉಪ ಆಯುಕ್ತರಾಗಿದ್ದರು.ಗಡಿಯಲ್ಲಿರುವ ರಾನಿಯಾ ಹಳ್ಳಿ ಬಳಿ 700 ಎಕರೆ ಜಮೀನಿಗೆ 'ವಿಪರೀತ' ಬೆಲೆ ನೀಡಲಾಗಿದೆ' ಎಂದು ಕುಲದೀಪ್‌ ಸಿಂಗ್‌ ಆರೋಪಿಸಿದ್ದಾರೆ.

'ರಾವಿ ನದಿಗೆ ಅಡ್ಡಲಾಗಿ ಅಂತರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತಿರುವ ಭೂಮಿಯನ್ನು ಅಂದಿನ ಸರ್ಕಾರ ಎಕರೆಗೆ ₹ 4.5 ಲಕ್ಷ ನೀಡಿ ಖರೀದಿಸಿತ್ತು. ಗಡಿ ಭದ್ರತಾ ಪಡೆಯ ಪೂರ್ವಾನುಮತಿ ಇಲ್ಲದೆ ಈ ಭೂಮಿಯನ್ನು ಖರೀದಿಸುವಂತಿಲ್ಲ. ಆಅವಧಿಯಲ್ಲಿಈ ಭೂಮಿಯನ್ನು ಯಾವ ಯೋಜನೆಯಡಿ ಖರೀದಿಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.ಭೂಮಿ ಮಾರಾಟ ಮಾಡಿದ ರೈತರನ್ನು ಸಂಪರ್ಕಿಸಿ ಸತ್ಯಾಂಶಪತ್ತೆ ಹಚ್ಚುತ್ತೇವೆ'ಎಂದು ಮಾಹಿತಿ ನೀಡಿದ್ದಾರೆ.

ರೈತ ಕುಟುಂಬಕ್ಕೆ ಸೇರಿದ ಮುಖ್ಯಮಂತ್ರಿಯವರು, ಕೃಷಿ ಸಚಿವರು, ಜಿಲ್ಲಾಧಿಕಾರಿಗಳು ಈ ಭೂಮಿಯನ್ನು ಇಷ್ಟು ದುಬಾರಿ ಬೆಲೆಗೆ ಹೇಗೆ ಖರೀದಿಸುತ್ತಾರೆ ಎಂಬುದೇ ಸಂಶಯದ ಸಂಗತಿ ಎಂದೂ ಧಲಿವಾಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಭೂಮಿ ಖರೀದಿಗೆ ಸಾರ್ವಜನಿಕರ ಹಣ ಹೇಗೆ ದುರುಪಯೋಗವಾಗಿದೆ ಎಂಬುದು ಬೇಸರ ಮೂಡಿಸುತ್ತಿದೆಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT