ಚಂಡೀಗಡ: ಪಂಜಾಬ್ ಸರ್ಕಾರದ ಮುಂದೆ ಈಗ ಇರುವುದು ಎರಡೇ ಆಯ್ಕೆ, ಅವುಗಳೆಂದರೆ ಸರಿಪಡಿಸಲಾಗದ ಹಾನಿ ಮತ್ತು ಹಾನಿ ಸರಿಪಡಿಸುವ ಕೊನೆಯ ಅವಕಾಶ. ಈ ಎರಡನೇ ಆಯ್ಕೆಯನ್ನು ಸರ್ಕಾರ ಆಯ್ದುಕೊಂಡು ಪಂಜಾಬ್ ಜನರ ನೈಜ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

‘ನೈಜ ಸಮಸ್ಯೆಗಳನ್ನು ಕಡೆಗಣಿಸಲು ನಾನಂತೂ ಅವಕಾಶ ನೀಡುವುದಿಲ್ಲ’ ಎಂದು ಅವರು ಭಾನುವಾರ ಇಲ್ಲಿ ಸ್ಪಷ್ಟಪಡಿಸಿದರು.

ಪಾಕಿಸ್ತಾನದ ಪತ್ರಕರ್ತೆ ಅರೋಸಾ ಅಲಂ ಜೊತೆಗಿನ ಸ್ನೇಹದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಪಂಜಾಬ್ನ ಹಲವು ಕಾಂಗ್ರೆಸ್ ನಾಯಕರು ಮಾತಿನ ಚಕಮಕಿ ನಡೆಸುತ್ತಿರುವ ಸಂದರ್ಭದಲ್ಲೇ ಸಿಧು ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಪಂಜಾಬ್ ಸರ್ಕಾರ ತನ್ನ ನಾಗರಿಕರು ಮತ್ತು ಮುಂದಿನ ಪೀಳಿಗೆಗೆ ಸಂಬಂಧಿಸಿದ ನೈಜ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ. ನಮ್ಮ ಮುಂದಿರುವ ಆರ್ಥಿಕ ಸಮಸ್ಯೆಯನ್ನು ನಾವು ಹೇಗೆ ಎದುರಿಸುತ್ತೇವೆ? ನಾನು ನೈಜ ವಿಷಯಗಳಿಗೆ ಬದ್ಧನಾಗಿ ಅಂಟಿಕೊಂಡವನು ಮತ್ತು ಅದನ್ನು ಬದಿಗೆ ಸರಿಸಲು ಅವಕಾಶ ನೀಡಲಾರೆ’ ಎಂದು ಅವರು ಸ್ಪಷ್ಟಪಡಿಸಿದರು.

ಈಚೆಗೆ ದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಹರೀಶ್ ರಾವತ್ ಅವರನ್ನು ಭೇಟಿ ಮಾಡಿದ್ದಾಗ ಸಿಧು ಅವರು 18 ಅಂಶಗಳ ಕಾರ್ಯಸೂಚಿಯನ್ನು ಮುಂದಿಟ್ಟಿದ್ದರು ಹಾಗೂ ಅವುಗಳ ಬಗ್ಗ ಇನ್ನೂ ಕ್ರಮ ಕೈಗೊಳ್ಳದೆ ಇರುವುದನ್ನು ಉಲ್ಲೇಖಿಸಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಇದೇ ವಿಚಾರದಲ್ಲಿ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.