ಸೋಮವಾರ, ಮೇ 23, 2022
30 °C

ರಾಹುಲ್ ಗಾಂಧಿ ಇಟಲಿಗೆ: ಗಾಳಿ ಸುದ್ದಿ ಬೇಡ ಎಂದ ಸುರ್ಜೇವಾಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಅಲ್ಪಾವಧಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ (ಮಂಗಳವಾರ) ಬಳಿಕ ಅವರು ಇಟಲಿಗೆ ತೆರಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲ, 'ರಾಹುಲ್‌ ಗಾಂಧಿ ವೈಯಕ್ತಿಕ ಕಾರಣಗಳಿಗಾಗಿ ಅಲ್ಪಾವಧಿಯ ವಿದೇಶ ಭೇಟಿಗೆ ತೆರಳಿದ್ದಾರೆ. ಬಿಜೆಪಿ ಮತ್ತು ಅವರ ಗೆಳೆಯರು ಮಾಧ್ಯಮಗಳಲ್ಲಿ ಅನವಶ್ಯಕವಾಗಿ ಗಾಳಿ ಸುದ್ದಿಗಳನ್ನು ಹರಡಬಾರದು' ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರು ಜನವರಿ 3ರಂದು ಪಂಜಾಬ್‌ನ ಮೊಗಾದಲ್ಲಿನ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗುವುದು ನಿಗದಿಯಾಗಿದೆ. ಆ ವೇಳೆಗೆ ಅವರು ಹಿಂದಿರುಗಲಿರುವುದು ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ ಹಾಗೂ ಮಣಿಪುರ ಸೇರಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಜನವರಿ ಮಧ್ಯದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು