ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ: ಮಹಾತ್ಮ ಗಾಂಧಿ ನೆಟ್ಟಿದ್ದ ಮರಕ್ಕೆ ರಾಹುಲ್‌ ಗಾಂಧಿ ನಮನ

Last Updated 22 ಸೆಪ್ಟೆಂಬರ್ 2022, 12:42 IST
ಅಕ್ಷರ ಗಾತ್ರ

ಕೊಚ್ಚಿ: ಕಾಂಗ್ರೆಸ್‌ ಕೈಗೊಂಡಿರುವ ಭಾರತ್‌ ಜೋಡೊ ಯಾತ್ರೆಗೆ ಕೇರಳದಲ್ಲಿ ಗುರುವಾರವೂ ಭಾರಿ ಬೆಂಬಲ ದೊರೆಯಿತು.ಆಲುವಾದಲ್ಲಿರುವ ಯೂನಿಯನ್‌ ಕ್ರಿಸ್ಚಿಯನ್‌ (ಯು.ಸಿ) ಕಾಲೇಜಿನಲ್ಲಿ 15ನೇ ದಿನದ ಯಾತ್ರೆಗೆ ಚಾಲನೆ ನೀಡಲಾಯಿತು.

ಮಹಾತ್ಮ ಗಾಂಧಿಯವರು 1925ರ ಮಾರ್ಚ್‌ 18ರಂದು ಯು.ಸಿ.ಕಾಲೇಜಿಗೆ ಭೇಟಿ ನೀಡಿದ್ದರು. ಆ ನೆನಪಿಗಾಗಿ ಕಾಲೇಜು ಆವರಣದಲ್ಲಿ ಮಾವಿನ ಸಸಿಯೊಂದನ್ನು ನೆಟ್ಟಿದ್ದರು. ಅದು ಬೃಹದಾಕಾರವಾಗಿ ಬೆಳೆದಿದ್ದು, ಆ ಮರಕ್ಕೆ ನಮನ ಸಲ್ಲಿಸುವ ಮೂಲಕ ರಾಹುಲ್‌ ಗಾಂಧಿ ಯಾತ್ರೆ ಆರಂಭಿಸಿದರು.

ಇದಕ್ಕೂ ಮುನ್ನ ಅವರು ಯಾತ್ರಿಗಳ ತಂಡವೊಂದು ಲಕ್ಷದ್ವೀಪದಿಂದ ತಂದಿದ್ದ ಸಸಿಯನ್ನು ಕಾಲೇಜು ಆವರಣದಲ್ಲಿ ನೆಟ್ಟರು.

ಬೆಳಿಗ್ಗೆ 6.30ಕ್ಕೆ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ರಾಹುಲ್‌ ಜೊತೆ ಕಾರ್ಯಕರ್ತರು ಉತ್ಸುಕತೆಯಿಂದ ಹೆಜ್ಜೆ ಹಾಕಿದರು. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯು ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು.

ಮುಂಜಾನೆ ಅವಧಿಯ ಯಾತ್ರೆಯು 11 ಕಿ.ಮೀ ದೂರವನ್ನು ಕ್ರಮಿಸಿ ಅಂಗಮಾಲಿಯ ಕರುಕುಟ್ಟಿ ಕಾಪ್ಪೆಲಾ ವೃತ್ತದಲ್ಲಿ ಕೊನೆಗೊಂಡಿತು. ಸಂಜೆ 5 ಗಂಟೆಗೆ ಚಿರಂಗರಾ ಬಸ್‌ ನಿಲ್ದಾಣದಿಂದ ಆರಂಭವಾದ ಯಾತ್ರೆ ಚಾಲಕುಡಿ ಪುರಸಭೆ ಬಳಿ ಮುಕ್ತಾಯವಾಯಿತು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT