ನವದೆಹಲಿ: ಕೇಂದ್ರ ರೈಲ್ವೆ ಸಚಿವಾಲಯವು ತನ್ನ ಉದ್ಯೋಗಿ ಮತ್ತು ಪಿಂಚಣಿದಾರರಿಗೆ ಅನುಕೂಲ ಕಲ್ಪಿಸಲು ದೇಶದಾದ್ಯಂತ ತನ್ನ 695 ಆಸ್ಪತ್ರೆಗಳು ಮತ್ತು ಆಸ್ಪತ್ರೆ ಘಟಕಗಳಲ್ಲಿ ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು (ಎಚ್ಎಂಐಎಸ್) ಜಾರಿಗೊಳಿಸಿದೆ.

ಎಚ್ಎಂಐಎಸ್ ಸುಧಾರಿತ ಆಸ್ಪತ್ರೆ ಆಡಳಿತ ಮತ್ತು ರೋಗಿಗಳ ಆರೋಗ್ಯ ರಕ್ಷಣೆಯ ಮೂಲ ಉದ್ದೇಶದೊಂದಿಗೆ ಸಮಗ್ರ ಕ್ಲಿನಿಕಲ್ ಮಾಹಿತಿ ವ್ಯವಸ್ಥೆಯಾಗಿದೆ. ಇದು ಆಸ್ಪತ್ರೆಯ ಆಡಳಿತ ಮತ್ತು ರೋಗಿಗಳಿಗೆ ನವೀನ ಮತ್ತು ಸುಧಾರಿತ ಅನುಭವವನ್ನು ಖಚಿತಪಡಿಸುತ್ತದೆ.

ರೋಗಿಗಳಿಗೆ ಅವರ ಹೊರರೋಗಿ ವಿಭಾಗದ (ಒಪಿಡಿ) ನೋಂದಣಿಗಳು, ವೈದ್ಯರ ಸಲಹೆ, ಲ್ಯಾಬ್ ವರದಿಗಳು, ಸ್ವಯಂ-ನೋಂದಣಿ, ಔಷಧ ಲಭ್ಯತೆ, ಲ್ಯಾಬ್ ಪರೀಕ್ಷೆಯ ಲಭ್ಯತೆ ಇತ್ಯಾದಿಗಳಿಗೆ ಸಂಬಂಧಿಸಿದ ಸುಲಭ ಮಾಹಿತಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಎಚ್ಐಎಂಎಸ್, ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

‘ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆಯಿಂದಾಗಿ 75 ಲಕ್ಷಕ್ಕೂ ಹೆಚ್ಚು ರೈಲ್ವೆ ಸಿಬ್ಬಂದಿ, ಪಿಂಚಣಿದಾರರು ಮತ್ತು ಅವರ ಕುಟುಂಬಗಳ ಜೀವನಕ್ಕೆ ಅನುಕೂಲವಾಗಲಿದೆ’ ಎಂದು ರೈಲ್ಟೆಲ್ ಸಿಎಂಡಿ ಪುನೀತ್ ಚಾವ್ಲಾ ಹೇಳಿದ್ದಾರೆ.

‘ಪ್ರಾಯೋಗಿಕ ಆಧಾರದ ಮೇಲೆ ಎಚ್ಎಂಐಎಸ್ ಅಳವಡಿಕೆಯನ್ನು 2020ರ ಡಿಸೆಂಬರ್ನಲ್ಲಿ ಆರಂಭಿಸಲಾಯಿತು. ಇದನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಾಗಿದ್ದು, ಭಾರತೀಯ ರೈಲ್ವೆಯ ಎಲ್ಲ ಆಸ್ಪತ್ರೆಗಳು ಮತ್ತು ಆರೋಗ್ಯ ಘಟಕಗಳಲ್ಲಿ ಈ ಸೌಲಭ್ಯ ದೊರೆಯಲಿದೆ’ ಎಂದು ರೈಲ್ವೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.