ಶನಿವಾರ, ನವೆಂಬರ್ 27, 2021
20 °C

ಕತ್ರೀನಾ ಕೆನ್ನೆಯಂತಹ ರಸ್ತೆಗಳು ಬೇಕೆಂದ ರಾಜಸ್ಥಾನ ಸಚಿವ ರಾಜೇಂದ್ರ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಇತ್ತೀಚೆಗಷ್ಟೇ ರಾಜಸ್ಥಾನ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜೇಂದ್ರ ಸಿಂಗ್‌ ಗುಢಾ ಅವರು ರಸ್ತೆ ನಿರ್ಮಾಣದ ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ನುಣುಪು ರಸ್ತೆಗಳನ್ನು ನಟಿ ಕತ್ರೀನಾ ಕೈಫ್‌ ಕೆನ್ನೆಗಳಿಗೆ ಹೋಲಿಸಿ ಮಾತನಾಡಿರುವ ವಿಡಿಯೊ ವೈರಲ್‌ ಆಗಿದೆ.

ಗ್ರಾಮಗಳ ರಸ್ತೆಗಳ ಸ್ಥಿತಿಯನ್ನು ಜನರು ಸಚಿವರ ಮುಂದಿಡುತ್ತಿದ್ದಂತೆ, ರಸ್ತೆಗಳನ್ನು ಬಾಲಿವುಡ್‌ ನಟಿ ಕತ್ರೀನಾ ಕೈಫ್‌ ಅವರ ಗಲ್ಲದಂತೆ ನುಣುಪಾಗಿ ಮಾಡಬೇಕೆಂದು ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರ ಸೂಚನೆಗೆ ಜನರು ಚಪ್ಪಾಳೆ ತಟ್ಟಿ ಕೇಕೆ ಹಾಕಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಆರಂಭದಲ್ಲಿ ಸಚಿವರು ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಗಳಂತೆ ನುಣುಪಾಗಿ ನಿರ್ಮಿಸಲು ಹೇಳಿದ್ದರು. ಆದರೆ, ಹೇಮಾ ಮಾಲಿನಿ ಅವರಿಗೆ ಈಗ ವಯಸ್ಸಾಗಿರುವುದನ್ನು ಗಮನಕ್ಕೆ ತಂದುಕೊಂಡ ಸಚಿವರು, ಈಗ ಯಾವ ನಟಿ ಅಲೆ ಎಬ್ಬಿಸಿದ್ದಾರೆ ಎಂದು ಜನರಲ್ಲಿ ಕೇಳಿದ್ದಾರೆ. ಆಗ ಕತ್ರೀನಾ ಕೈಫ್‌ ಹೆಸರು ಪ್ರಸ್ತಾಪವಾಗಿದೆ ಎಂದು ವರದಿಯಾಗಿದೆ.

ತಮ್ಮ ಕ್ಷೇತ್ರದಲ್ಲಿ ರಸ್ತೆಗಳನ್ನು ಕತ್ರೀನಾ ಕೈಫ್‌ ಅವರ ಗಲ್ಲದಂತೆ ನಯವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಸಚಿವ ರಾಜೇಂದ್ರ ಗುಢಾ ಸೂಚನೆ ನೀಡಿದ್ದಾರೆ.


ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಚಿವ ರಾಜೇಂದ್ರ ಗುಢಾ

ರಾಜೇಂದ್ರ ಅವರು ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದೆ.

ಈ ಹಿಂದೆ ಬಿಹಾರದ ಲಾಲು ಪ್ರಸಾದ್‌ ಅವರು ಸಹ ಹೇಮಾ ಮಾಲಿನಿ ಅವರ ಗಲ್ಲದಂತೆ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ನೀಡಿದ್ದ ಹೇಳಿಕೆಯೂ ಟೀಕೆಗೆ ಗುರಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು