ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿಗೆ ರಾಜಸ್ಥಾನ ತತ್ತರ: 13 ಜಿಲ್ಲೆಗಳಲ್ಲಿ 47 ಡಿಗ್ರಿಗೂ ಅಧಿಕ ತಾಪಮಾನ

Last Updated 14 ಮೇ 2022, 11:34 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನವು ಗಂಭೀರ ಬಿಸಿ ಗಾಳಿಯ ಹೊಡೆತಕ್ಕೆ ಸಿಲುಕಿದೆ. ಹತ್ತಿರತ್ತಿರ ಎಲ್ಲ ಜಿಲ್ಲೆಗಳಲ್ಲೂ ಕಳೆದ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.

33 ಜಿಲ್ಲೆಗಳ ಪೈಕಿ 13ರಲ್ಲಿ 47 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಸೂರ್ಯನ ತೀವ್ರ ಶಾಖದಿಂದಾಗಿ ಜನರು ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ.

ಶ್ರೀಗಂಗಾನಗರದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 48.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರೌಲಿ ಮತ್ತು ಬರಾನ್‌ನಲ್ಲಿ 47.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ರಾಜ್ಯದಲ್ಲಿ ಅತ್ಯಧಿಕ ತಾಪಮಾನ ದಾಖಲಾದ 3 ಪ್ರದೇಶಗಳಾಗಿವೆ.

ಪಿಲಾನಿಯಲ್ಲಿ 47.7 ಡಿಗ್ರಿ, ಜೈಸಲ್ಮೇರ್‌ನಲ್ಲಿ 47,5 ಡಿಗ್ರಿ, ಬಿಕನೇರ್‌ನಲ್ಲಿ 47.4, ಧೋಲ್‌ಪುರ್‌ನಲ್ಲಿ 47.6, ಬುಡಿಯಲ್ಲಿ 47, ಕೋಟದಲ್ಲಿ 47.2 ಮತ್ತು ಹನುಮಾನ್‌ಗಡದಲ್ಲಿ 47.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುಂದಿನ 24 ಗಂಟೆಗಳ ಅವಧಿಯಲ್ಲಿ ಜೈಪುರದಲ್ಲಿ ಬಿರುಸಾದ ಗಾಳಿ ಬೀಸಲಿದ್ದು, ತಾಪಮಾನ ಎರಡರಿಂದ ಮೂರು ಡಿಗ್ರಿ ಇಳಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT