ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಖ್‌ಗೆ ರಾಜನಾಥ್‌ ಸಿಂಗ್‌: ಚೀನಾ ಸೇನೆ ವಾಪಸ್ ಪ್ರಕ್ರಿಯೆ ಸಿದ್ಧತೆ ಪರಿಶೀಲನೆ

Last Updated 27 ಜೂನ್ 2021, 10:31 IST
ಅಕ್ಷರ ಗಾತ್ರ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಭಾನುವಾರ ಲಡಾಖ್‌ಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು,‘ ಭಾರತದ ಸೈನಿಕರ ಬದ್ಧತೆಯನ್ನು ಶ್ಲಾಘಿಸಿದರು.

ಚೀನಾದೊಂದಿಗೆ ಗಡಿ ವಿವಾದದ ಹಿನ್ನೆಲೆಯಲ್ಲಿ ಲಡಾಖ್‌ ಪ್ರದೇಶದಲ್ಲಿ ಭಾರತೀಯ ಸೇನೆಯ ಸಿದ್ಧತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ರಾಜನಾಥ್‌ ಸಿಂಗ್‌ ಅವರು ಲಡಾಖ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈ ಭೇಟಿ ವೇಳೆ ಕಾರ್ಗಿಲ್‌, ಲೇಹ್‌,ಲಡಾಖ್‌ನ ಗಿರಿ ಅಭಿವೃದ್ಧಿ ಸ್ವಾಯತ್ತ ಮಂಡಳಿಯ ಚುನಾಯಿತ ಹಿರಿಯ ಅಧಿಕಾರಿಗಳೊಂದಿಗೆ ರಾಜನಾಥ್‌ ಅವರು ಸಂವಾದ ನಡೆಸಿದರು. ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಅವರು ಚರ್ಚಿಸಿದರು.

ಬಳಿಕ ಮಿಲಿಟರಿಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಅವರ ಯೋಗಕ್ಷೇಮ ಮತ್ತು ರಾಷ್ಟ್ರೀಯ ಭದ್ರತೆ ಬಗ್ಗೆ ವಿಚಾರಿಸಿದರು. ಸೇನಾಪಡೆ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಉಪಸ್ಥಿತರಿದ್ದರು.

‘ದೇಶದ ಬಗ್ಗೆ ಸೈನಿಕರು ಮತ್ತು ಹಿರಿಯರಿಗಿರುವ ನಿಷ್ಠೆಯು ಅನುಕರಣೀಯ. ನಿಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನೀವು ಹೇಗೆ ದೇಶದ ಭದ್ರತೆಯನ್ನು ಕಾಪಾಡುವಿರೋ ಅದೇ ರೀತಿ ನಿಮ್ಮನ್ನು ಕೂಡ ನೋಡಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಆದರೂ ನಿಮಗೆ ಯಾವುದೇ ತೊಂದರೆ ಬಂದರೆ ನೀವು ಸಹಾಯವಾಣಿಗೆ ಕರೆ ಮಾಡಬಹುದು’ ಎಂದು ರಾಜನಾಥ್‌ಸಿಂಗ್‌ ಅವರು ಹೇಳಿದರು.

‘ಪೂರ್ವಾ ಲಡಾಖ್‌ನ ಕೆಲ ಭಾಗಗಳಿಂದ ಚೀನಾವು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಮುಂದಿನ ಭಾಗವಾಗಿ ಬಾಕಿ ಉಳಿದಿರುವ ಸ್ಥಳಗಳಿಂದ ಸೇನೆಯನ್ನು ವಾಪಸು ಕರೆಸಿಕೊಳ್ಳಲಾಗುವುದು. ಈ ಭೇಟಿಯ ವೇಳೆ ರಾಜನಾಥ್‌ ಸಿಂಗ್‌ ಅವರು ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಕುರಿತಾಗಿ ಪರಿಶೀಲನೆ ನಡೆಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT