ಶನಿವಾರ, ಸೆಪ್ಟೆಂಬರ್ 19, 2020
22 °C

ಸುಶಾಂತ್‌ ಪ್ರಕರಣ| ರಿಯಾ, ಬಿಹಾರ ಸರ್ಕಾರದಿಂದ‘ಸುಪ್ರೀಂ’ಗೆ ಲಿಖಿತ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರ ಗುರುವಾರ ಲಿಖಿತ ಹೇಳಿಕೆ ದಾಖಲಿಸಿದೆ. ಜತೆಗೆ ನಟಿ ರಿಯಾ ಚಕ್ರವರ್ತಿ ಅವರೂ ಹೇಳಿಕೆ ದಾಖಲಿಸಿದ್ದಾರೆ.  

ರಿಯಾ ಅರ್ಜಿ ವಜಾಗೊಳಿಸಲು ಬಿಹಾರ ಸರ್ಕಾರ ಕೋರಿದೆ. ಸರ್ಕಾರದ ವಕೀಲ ಕೇಶವ ಮೋಹನ್ ಅವರು, ಸಿಬಿಐಗೆ ಪೂರ್ಣಪ್ರಮಾಣದಲ್ಲಿ ತನಿಖೆ ನಡೆಸಲು ಅವಕಾಶವಿದ್ದು, ಯಾವುದೇ ತೊಡಕು ಇರಬಾರದು ಎಂದು ಕೋರಿದರು.

ರಿಯಾ ಅವರು ತಮ್ಮ ಮನವಿಯಲ್ಲಿ, ‘ತನ್ನ ವ್ಯಾಪ್ತಿಗೇ ಬಾರದ ಬಿಹಾರ ಪೊಲೀಸರ ಮನವಿ ಮೇರೆಗೆ ಪ್ರಕರಣ ಸಿಬಿಐಗೆ ವರ್ಗಾಯಿಸಲಾಗಿದೆ’ ಎಂದಿದ್ದಾರೆ.

ಅರ್ಜಿಗೆ ಸಂಭಂಧಿಸಿದಂತೆ ಆಗಸ್ಟ್ 11ರಂದು ಆದೇಶ ಕಾಯ್ದಿರಿಸಿದ್ದ ಸುಪ್ರೀಂ ಕೋರ್ಟ್ ಲಿಖಿತ ಹೇಳಿಕೆ ದಾಖಲಿಸಲು ಸಂಬಂಧಿಸಿದ ಅರ್ಜಿಯ ಪ್ರತಿವಾದಿಗಳಿಗೆ ಸೂಚನೆ ನೀಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು