ಸೋಮವಾರ, ಮೇ 23, 2022
30 °C
ಎಂಟು ಸಂಸದರ ಅಮಾನತು ವಿರೋಧಿಸಿ ವಿರೋಧ ಪಕ್ಷದವರ ಪ್ರತಿಭಟನೆ

ರಾಜ್ಯಸಭೆಯಲ್ಲಿ ಸದಸ್ಯರ ಗದ್ದಲ; ಒಂದು ದಿನ ಸದನ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂಗಾರು ಅಧಿವೇಶನದ ಉಳಿದ ಕಲಾಪಗಳಿಗೆ ಎಂಟು ಸಂಸದರನ್ನು ಅಮಾನತುಗೊಳಿಸಿದ ನಂತರ ಉಂಟಾದ ಗದ್ದಲದಿಂದಾಗಿ ರಾಜ್ಯಸಭಾ ಕಲಾಪವನ್ನು ಒಂದು ದಿನ ಮುಂದೂಡಲಾಯಿತು.

ಸೋಮವಾರ ಬೆಳಿಗ್ಗೆ ಸದನ ಕಲಾಪ ಆರಂಭವಾಗುತ್ತಿದ್ದಂತೆ, ಕೃಷಿ ಮಸೂದೆಗಳ ಮಂಡನೆವೇಳೆ ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಟಿಎಂಸಿ ನಾಯಕ ಡೇರಕ್ ಒಬ್ರಿಯೆನ್ ಮತ್ತು ಆಪ್ ಸಂಸದ ಸಂಜಯ್ ಸಿಂಗ್ ಸೇರಿದಂತೆ ಎಂಟು ಮಂದಿಯನ್ನು ಮುಂಗಾರು ಅಧಿವೇಶನದ ಉಳಿದ ಕಲಾಪಗಳಲ್ಲಿ ಭಾಗವಹಿಸದಂತೆ ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಪತಿ ಹರಿವಂಶಸಿಂಗ್ ಅಮಾನತುಗೊಳಿಸಿದರು. 

ಇದನ್ನು ವಿರೋಧಿಸಿ ವಿರೋಧಪಕ್ಷಗಳು ತೀವ್ರಗದ್ದಲ ಎಬ್ಬಿಸಿದ್ದರು. ಕೋಲಾಹಲದ ನಡುವೆ ಕಾರ್ಯಕಲಾಪಗಳನ್ನು ನಡೆಸಲಾಗದ ಕಾರಣ ಮೂವತ್ತು ನಿಮಷಗಳ ಕಾಲ ಸದನ ಕಲಾಪವನ್ನು ಉಪಸಭಾಪತಿ ಮುಂದೂಡಿದರು. ಸದನ ಪುನಃ ಆರಂಭವಾದಾಗ ವಿರೋಧ ಪಕ್ಷದ ಸದಸ್ಯರು ಗದ್ದಲವನ್ನು ಮುಂದುವರಿಸಿದ್ದರು. ಹೀಗಾಗಿ ಒಟ್ಟು ಐದು ಬಾರಿ ಕಲಾಪವನ್ನು ಮುಂದೂಡಲಾಯಿತು.

ಮಧ್ಯಾಹ್ನ 12 ಗಂಟೆಗೆ ಸದನ ಪುನಃ ಆರಂಭವಾಯಿತು. ಸಭಾ‍ಧ್ಯಕ್ಷರ ಪೀಠದಲ್ಲಿ ಕುಳಿತಿದ್ದ ಸಂಸದರಾದ ಭುವನೇಶ್ವರ ಖಲಿತಾ, ಅಮಾನತುಗೊಂಡಿರುವ ಸದಸ್ಯರನ್ನು ಸದನದಿಂದ ಹೊರ ನಡೆಯುವಂತೆ ಸೂಚಿಸಿ, ಸದನದಲ್ಲಿ ಕೋರಂ ಇರುವಂತೆ ನೋಡಿಕೊಳ್ಳಲು ಉಳಿದ ಸದಸ್ಯರಿಗೆ ತಿಳಿಸಿದರು. ಸದನವನ್ನು ಒಂದು ದಿನ ಮುಂದೂಡುವುದಕ್ಕೂ ವಿರೋಧಪಕ್ಷದ ಸದಸದ್ಯರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು