ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣಕ್ಕೆ ಅಂದಾಜು ₹1100 ಕೋಟಿ ವೆಚ್ಚ: ಸ್ವಾಮಿ ಗೋವಿಂದ್

Last Updated 24 ಜನವರಿ 2021, 10:54 IST
ಅಕ್ಷರ ಗಾತ್ರ

ಮುಂಬೈ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು ಮೂರು ವರ್ಷಗಳು ಬೇಕಾಗುತ್ತವೆ. ಈ ಯೋಜನೆಗೆ ಅಂದಾಜು ₹1,100 ಕೋಟಿಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆಯಿದೆ ಎಂದು ದೇವಾಸ್ಥಾನದ ಟ್ರಸ್ಟ್‌ನ ಪ್ರಮುಖ ಕಾರ್ಯಕಾರಿಣಿಯೊಬ್ಬರು ಹೇಳಿದರು.

‘ಮುಖ್ಯ ದೇವಾಲಯ ನಿರ್ಮಾಣಕ್ಕೆ ₹300– ₹400 ಕೋಟಿ ವೆಚ್ಚವಾಗಲಿದೆ. ಸಂಪೂರ್ಣ 70 ಎಕರೆ ಜಮೀನಿನ ಅಭಿವೃದ್ಧಿಗೆ ₹1,100 ಕೋಟಿ ಬೇಕಾಗಬಹುದು’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಅವರು ಮಾಹಿತಿ ನೀಡಿದರು.

‘ಈ ಬಗ್ಗೆ ರಾಮ ಮಂದಿರ ನಿರ್ಮಾಣ ಯೋಜನೆಯ ತಜ್ಞರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಂಪೂರ್ಣ ವೆಚ್ಚವನ್ನು ಅಂದಾಜಿಸಲಾಗಿದೆ’ ಎಂದು ಅವರು ಹೇಳಿದರು.

ಆದರೆ ರಾಮ ಮಂದಿರ ನಿರ್ಮಾಣದ ಸಂಪೂರ್ಣ ವೆಚ್ಚದ ಬಗ್ಗೆ ಟ್ರಸ್ಟ್‌ ಈವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

‘ಕೆಲವೊಂದು ಕಾರ್ಪೊರೇಟ್‌ ಕಂಪನಿಗಳು ಮಂದಿರ ನಿರ್ಮಿಸಲು ದೇಣಿಗೆ ನೀಡುವುದಾಗಿ ಹೇಳಿವೆ. ಇದಕ್ಕೂ ಮುನ್ನ ಕಾರ್ಪೊರೇಟ್‌ ಕಂಪನಿಗಳು, ರಾಮ ಮಂದಿರದ ವಿನ್ಯಾಸವನ್ನು ನೀಡಿದರೆ, ತಾವೇ ನಿರ್ಮಿಸಿ ಕೊಡುವುದಾಗಿ ಹೇಳಿದ್ದವು. ಆದರೆ ನಾವು ಅವರ ಮನವಿಯನ್ನು ವಿನಮ್ರವಾಗಿ ನಿರಾಕರಿಸಿದೆವು’ ಅವರು ತಿಳಿಸಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಬಿಜೆಪಿಯು 2024ರ ಲೋಕಸಭಾ ಚುನಾವಣೆಯ ಪ್ರಚಾರ ಮಾಡುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜನರು ಯಾವ ಬಣ್ಣದ ಕನ್ನಡಕ ಧರಿಸುತ್ತಾರೆಯೋ ಅದೇ ಬಣ್ಣದಲ್ಲಿ ದೃಶ್ಯಗಳು ಕಾಣುತ್ತವೆ. ಆದರೆ ನಾವು ಯಾವುದೇ ಕನ್ನಡಕವನ್ನು ಧರಿಸಿಲ್ಲ’ ಎಂದು ಅವರು ಹೇಳಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ6.5 ಲಕ್ಷ ಗ್ರಾಮಗಳು ಮತ್ತು 15 ಕೋಟಿ ಮನೆಗಳಿಂದ ದೇಣಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ. ಒಂದೇ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ದೇಣಿಗೆ ನೀಡಲು ಸಿದ್ಧವಿದ್ದರೇ ಅವರಿಂದಲೂ ಹಣ ಸಂಗ್ರಹಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT