ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ದೇಶದ ಜನರಿಂದ ಸಂಗ್ರಹಿಸಲಾದ ಹಣದಿಂದಲೇ ನಿರ್ಮಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಬುಧವಾರ ತಿಳಿಸಿದ್ದಾರೆ.

ವಿದೇಶದಿಂದ ದೇಣಿಗೆ ಪಡೆಯಲು ಅಗತ್ಯ ಅನುಮೋದನೆ ದೊರೆತಿಲ್ಲ. ಹೀಗಾಗಿ, ಸಾಮೂಹಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಮ ಮಂದಿರವು ’ರಾಷ್ಟ್ರ ಮಂದಿರ’ದ ರೂಪ ಪಡೆಯಲಿದೆ. ಇದಕ್ಕಾಗಿ, ದೇಣಿಗೆ ಪಡೆಯುವ ನಿಟ್ಟಿನಲ್ಲಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳನ್ನು ಶೀಘ್ರ ಆರಂಭಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಪ್ರಸ್ತಾಪಿತ ರಾಮ ಮಂದಿರದ ಚಿತ್ರಗಳನ್ನು ದೇಶದಾದ್ಯಂತ ಎಲ್ಲರಿಗೂ ತಲುಪಿಸಲು ಪ್ರಯತ್ನಿಸಲಾಗುವುದು. ₹10, ₹100 ಮತ್ತು ₹1000 ಕೂಪನ್‌ಗಳ ಮೂಲಕ ರಾಮಭಕ್ತರು ಸ್ವಯಂ ಪ್ರೇರಣೆಯಿಂದ ನೀಡುವ ಹಣವನ್ನು ಸ್ವೀಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ₹10 ಮುಖಬೆಲೆಯ ನಾಲ್ಕು ಕೋಟಿ ಕೂಪನ್‌ಗಳನ್ನು ಮುದ್ರಿಸಿದೆ. ಅದೇ ರೀತಿ ₹100 ಮುಖಬೆಲೆಯ 8 ಕೋಟಿ ಕೂಪನ್‌ಗಳು ಮತ್ತು ₹1000 ಮುಖಬೆಲೆಯ 12 ಲಕ್ಷ ಕೂಪನ್‌ಗಳನ್ನು ಮುದ್ರಿಸಲಾಗಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.