ಗುರುವಾರ , ಫೆಬ್ರವರಿ 25, 2021
28 °C

ರಾಷ್ಟ್ರಧರ್ಮ ಎಲ್ಲಕ್ಕಿಂತಲೂ ಮಿಗಿಲು: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ‘ನಮ್ಮ ಸಾರ್ವಜನಿಕ ಜೀವನವು ಒಂದು ಧರ್ಮಕ್ಕೆ ಪ್ರೇರಣೆ ನೀಡುತ್ತದೆ. ಅದುವೇ ರಾಷ್ಟ್ರಧರ್ಮ. ಇದು ಎಲ್ಲಕ್ಕಿಂತ, ಎಲ್ಲರಿಗಿಂತ ಮಿಗಿಲಾದದ್ದು’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಹೇಳಿದ್ದಾರೆ.

‘ನಾವೆಲ್ಲರೂ ಬರೀ ವೈಯಕ್ತಿಕ ಜೀವನ ಮಾತ್ರ ಹೊಂದಿರುವುದಿಲ್ಲ. ಸಾರ್ವಜನಿಕ ಜೀವನವನ್ನೂ ಹೊಂದಿರುತ್ತೇವೆ. ಇದು  ನಮಗೆ ರಾಷ್ಟ್ರ ಧರ್ಮಕ್ಕೆ ಪ್ರೇರಣೆ ನೀಡುತ್ತದೆ. ಇದು ಎಲ್ಲರಿಗಿಂತಲೂ ಮಿಗಿಲಾದದ್ದು. ಇದಕ್ಕಾಗಿ ನಾವು ಶ್ರದ್ಧೆಯಿಂದ ಕೆಲಸ ಮಾಡಬೇಕು’ ಎಂದು ಯೋಗಿ ಆದಿತ್ಯನಾಥ್  ಕಾಳಿದಾಸ ಮಾರ್ಗ ನಿವಾಸದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು 4 ಲಕ್ಷ  ಯುವಕರಿಗ ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಹೇಳಿದ ಅವರು, ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಯುವಕರಿಗೆ ಉಚಿತ ತರಬೇತಿ ನೀಡುವ ಕುರಿತು ಯೋಜನೆಯನ್ನೂ ಘೋಷಿಸಿದರು. ‌

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೊರೊನಾ ನಿರ್ವಹಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಆದಿತ್ಯನಾಥ್, ‘ಭಾರತ ಮೊದಲ ಬಾರಿಗೆ ಲಾಕ್‌ಡೌನ್‌ಗೆ ಸಾಕ್ಷಿಯಾಗಬೇಕಾಯಿತು. ಪ್ರಧಾನಿ ಅವರ ನಾಯಕತ್ವದಲ್ಲಿ ದೇಶವು ಶಿಸ್ತು ಪಾಲಿಸುವಂತಾಯಿತು. ಅಮೆರಿಕ ಮತ್ತು ಯುರೋಪಿನ ಇತರ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಉತ್ತಮ ಆರೋಗ್ಯ ಸೌಕರ್ಯವಿದ್ದರೂ ಅಲ್ಲಿ ಪ್ರಾಣಹಾನಿ ಹೆಚ್ಚಾಗಿದೆ. ಆದರೆ, ಭಾರತದಲ್ಲಿ ಪ್ರಧಾನಿ ಅವರ ಸಮಯೋಚಿತ ನಿರ್ಧಾರ ಮತ್ತು ಅವರು ರೂಪಿಸಿದ ಕೊರೊನಾ ನೀತಿಯು ಜೀವಗಳನ್ನು ಉಳಿಸುವಲ್ಲಿ ನೆರವಾಯಿತು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು