ಶುಕ್ರವಾರ, ಮೇ 27, 2022
23 °C

ಕೃಷಿ ಕಾಯ್ದೆಗಳು ಹಿಂಪಡೆಯಲು ನಿರ್ಧಾರ: ಚುನಾವಣೆ ಸೋಲಿನ ಭಯದಿಂದ ಆಗಿದೆ– ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಬಗ್ಗೆ ರೈತರ ಹೋರಾಟದ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸ್ವಾಗತಿಸಿದೆ. ವರ್ಷದ ಬಳಿಕ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದೆ.

ಒಗ್ಗಟ್ಟು ಮತ್ತು ನ್ಯಾಯ ಪರ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.

ಅಂತಿಮವಾಗಿ, ರೈತರನ್ನು ಸಂಕಷ್ಟಕ್ಕೆ ದೂಡಿದ ಒಂದು ವರ್ಷದ ನಂತರ, 3 ಕೃಷಿ ಕಾನೂನುಗಳನ್ನು (ತನ್ನ ಆಪ್ತರಾದ ಅಂಬಾನಿ/ಅದಾನಿಗಳಿಗೆ ಕೃಷಿ ಕ್ಷೇತ್ರವನ್ನು ನೀಡಲು ವಿನ್ಯಾಸಗೊಳಿಸಲಾಗಿದ್ದ) ಋಣಾತ್ಮಕ ಚುನಾವಣಾ ಪರಿಣಾಮವನ್ನು ನೋಡಿದ ನಂತರ, ಅವುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಘೋಷಿಸಿದ್ದಾರೆ ಎಂದು ವಕೀಲ ಪ್ರಶಾಂತ್ ಭೂಷಣ್  ಟ್ವೀಟ್ ಮಾಡಿದ್ದಾರೆ.

 

ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಏನನ್ನು ಸಾಧಿಸಲಾಗದ್ದನ್ನ ಮುಂಬರುವ ಚುನಾವಣೆಯ ಭಯದಿಂದ ಸಾಧಿಸಬಹುದು!  ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರಧಾನ ಮಂತ್ರಿಯವರ ಘೋಷಣೆಯು ನೀತಿಯ ಬದಲಾವಣೆ ಅಥವಾ ಹೃದಯದ ಬದಲಾವಣೆಯಿಂದ ಪ್ರೇರಿತವಾಗಿಲ್ಲ. ಇದು ಚುನಾವಣೆಯ ಭಯದಿಂದ ಆಗಿದೆ! ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಟ್ವೀಟ್ ಮೂಲಕ ಕುಟುಕಿದ್ದಾರೆ.

ಇದನ್ನೂ ಓದಿ..  ಮೂರೂ ಕೃಷಿ ಕಾಯ್ದೆಗಳು ರದ್ದು: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು