ಮಂಗಳವಾರ, ಸೆಪ್ಟೆಂಬರ್ 21, 2021
27 °C

ಅಧಿಕಾರಿಗಳ ಕಿರುಕುಳ, ಲೈಸೆನ್ಸ್ ರಾಜ್‌ ಸ್ಥಿತಿ ಈಗಿಲ್ಲ: ಸೈರಸ್‌ ಪೂನಾವಾಲಾ

ಪಿಟಿಐ Updated:

ಅಕ್ಷರ ಗಾತ್ರ : | |

ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾದಲ್ಲಿ ಸಿಬ್ಬಂದಿ ಕಾರ್ಯಾಚರಣೆ–ಸಾಂದರ್ಭಿಕ ಚಿತ್ರ

ಪುಣೆ: ಈ ಹಿಂದೆ ಲೈಸೆನ್ಸ್ ಪಡೆಯಲು ಔಷಧ ನಿಬಂಧಕರು, ಅಧಿಕಾರಿಗಳ ಕಾಲಿಗೂ ಬೀಳಬೇಕಿತ್ತು. ಈಗ ಮೋದಿ ಆಡಳಿತದಲ್ಲಿ ಅಧಿಕಾರಿಗಳ ಮನವೊಲಿಸುವಿಕೆ, ಲೈಸೆನ್ಸ್‌ ರಾಜ್‌ ಪರಿಸ್ಥಿತಿ ಕಡಿಮೆಯಾಗಿದೆ ಎಂದು ಸೀರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾದ (ಎಸ್‌ಐಐ) ಅಧ್ಯಕ್ಷ ಡಾ.ಸೈರಸ್ ಪೂನಾವಾಲಾ ಅವರು ಹೇಳಿದ್ದಾರೆ.

‘ಬದಲಾದ ಸ್ಥಿತಿಯಿಂದಾಗಿ ಎಸ್‌ಐಐ ಸಂಸ್ಥೆಯು ತ್ವರಿತಗತಿಯಲ್ಲಿ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಯನ್ನು ಆರಂಭಿಸುವುದು ಸಾಧ್ಯವಾಯಿತು ಎಂದು ತಮ್ಮ ಮಾತಿಗೆ ನಿದರ್ಶನ ನೀಡಿದರು. ಲೋಕಮಾನ್ಯ ತಿಲಕ್‌ ಟ್ರಸ್ಟ್‌ ಸ್ಥಾಪಿಸಿರುವ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಇದನ್ನೂ ಓದಿ: ಭಾರತ್ ಬಯೋಟೆಕ್ ಕೋವಿಡ್ ನಾಸಲ್ ಲಸಿಕೆ: 2, 3ನೇ ಪ್ರಯೋಗಕ್ಕೆ ಅನುಮೋದನೆ

ಸೀರಂ ಇನ್‌ಸ್ಟಿಟ್ಯೂಟ್‌ ಅನ್ನು 1966ರಲ್ಲಿ ದಿವಂಗತ ಪತ್ನಿ ವಿಲೂ ಜೊತೆಗೆ ಮದುವೆಯಾದ ಮಾರನೇ ದಿನ ಸ್ಥಾಪಿಸಲಾಗಿತ್ತು. ಅವರಿಗೇ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಡಾ.ಸೈರಸ್ ಪೂನಾವಾಲಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು