ಗುರುವಾರ , ಮಾರ್ಚ್ 30, 2023
23 °C

ನೀಟ್–ಯುಜಿ ಫಲಿತಾಂಶ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ನವದೆಹಲಿ (ಪಿಟಿಐ): ವೈದ್ಯಕೀಯ ಶಿಕ್ಷಣ ಪದವಿ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ’ನೀಟ್‌ ಪ್ರವೇಶ ಪರೀಕ್ಷೆಯ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಮೊದಲ ರ‍್ಯಾಂಕ್ ಅನ್ನು ಮೂವರು ಹಂಚಿಕೊಂಡಿದ್ದಾರೆ.

ತೆಲಂಗಾಣದ ಮೃಣಾಲ್‌ ಕುಟ್ಟೇರಿ, ದೆಹಲಿಯ ತನ್ಮಯ್‌ ಗುಪ್ತ, ಮಹಾರಾಷ್ಟ್ರದ ಕಾರ್ತಿಕ್‌ ಜಿ.ನಾ ಯರ್ ಅವರು ಮೊದಲಿಗರಾಗಿ ಹೊರಹೊಮ್ಮಿದ್ದು, ಪ್ರಥಮ ರ‍್ಯಾಂಕ್‌ ಹಂಚಿಕೊಂಡಿದ್ದಾರೆ.

ಪ್ರಥಮ ರ‍್ಯಾಂಕ್‌ ಅನ್ನು ಮೂವರು ಹಂಚಿಕೊಂಡಿರುವ ಕಾರಣ, ಕೌನ್ಸೆಲಿಂಗ್‌ ನಡೆಯುವಾಗ ಪ್ರವೇಶ ಕಲ್ಪಿಸಲು ಟೈ–ಬ್ರೇಕಿಂಗ್ ಸೂತ್ರವನ್ನು ಅನುಸರಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪ್ರಕಟಿಸಿದೆ. ನೀಟ್‌–ಯುಜಿ ಪ್ರವೇಶ ಪರೀಕ್ಷೆಯಲ್ಲಿ 15 ವಿದ್ಯಾರ್ಥಿಗಳು ಅಕ್ರಮದಲ್ಲಿ ತೊಡಗಿದ್ದು ಸಾಬೀತಾಗಿದ್ದು, ಅವರ ಫಲಿತಾಂಶವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು