ಶುಕ್ರವಾರ, ಅಕ್ಟೋಬರ್ 7, 2022
23 °C

ರಸ್ತೆ ಅಪಘಾತ: 2021ರಲ್ಲಿ ಅತ್ಯಧಿಕ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 2021ರಲ್ಲಿ ರಸ್ತೆ ಅಪಘಾತದಿಂದಾಗಿ 1.55 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ತನ್ನ ‘ಆ್ಯಕ್ಸಿಡೆಂಟಲ್‌ ಡೆತ್ಸ್‌ ಆ್ಯಂಡ್‌ ಸೂಸೈಡ್ಸ್‌ ಇನ್‌ ಇಂಡಿಯಾ 2021’ ವರದಿಯಲ್ಲಿ ಹೇಳಿದೆ. ಇದು ಒಂದು ವರ್ಷದ ಅವಧಿಯಲ್ಲಿ ಈವರೆಗಿನ ಗರಿಷ್ಠ ಸಂಖ್ಯೆ. ಹೆಚ್ಚಿನ ರಸ್ತೆ ಅಪಘಾತವು (ಶೇ 59.7) ಅತಿಯಾದ ವೇಗದಿಂದಲೇ ಸಂಭವಿಸಿವೆ. ಈ ಕಾರಣದಿಂದಾಗಿ 87,050 ಮಂದಿ ಮೃತಪಟ್ಟಿದ್ದಾರೆ. 2.28 ಲಕ್ಷ ಮಂದಿ ಗಾಯಗೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟವರು
2017
; 1.50ಲಕ್ಷ
2018; 1.52ಲಕ್ಷ
2019; 1.54ಲಕ್ಷ
2020; 1.33ಲಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು