ಭಾಗವತ್ ಹೇಳಿಕೆಗೆ ಸಹಮತ: ಮನುಷ್ಯರು ಮನುಷ್ಯರಾಗಿಯೇ ಉಳಿಯಬೇಕು –ಕಪಿಲ್ ಸಿಬಲ್

ನವದೆಹಲಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಸಹಮತ ವ್ಯಕ್ತಪಡಿಸಿದ್ದು, ಮನುಷ್ಯರು ಮನುಷ್ಯರಾಗಿಯೇ ಉಳಿಯಬೇಕು ಎಂದು ಹೇಳಿದ್ದಾರೆ.
ಮೋಹನ್ ಭಾಗವತ್ ಅವರು, ಆರ್‌ಎಸ್‌ಎಸ್ ಮುಖವಾಣಿಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಹಿಂದೂಸ್ತಾನ್ ಹಿಂದೂಸ್ತಾನವಾಗಿಯೇ ಉಳಿದಿರುವುದರಿಂದ ಮುಸ್ಲಿಮರಿಗೆ ಭಾರತದಲ್ಲಿ ಯಾವುದೇ ಭಯವಿಲ್ಲ ಎಂದು ಹೇಳಿದ್ದರು.
Bhagwat :
“ Hindusthan should should remain Hindusthan “
Agree
But:
Insaan should remain Insaan
— Kapil Sibal (@KapilSibal) January 11, 2023
ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್ ಅವರು, ಹಿಂದೂಸ್ತಾನ್ ಹಿಂದೂಸ್ತಾನವಾಗಿಯೇ ಉಳಿಯಬೇಕು ಎಂಬ ಭಾಗವತ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಮನುಷ್ಯರು ಮನುಷ್ಯರಾಗಿಯೇ ಉಳಿಯಬೇಕು ಎಂದು ಹೇಳಿದ್ದಾರೆ.
ಮೋಹನ್ ಭಾಗವತ್ ಅವರು ದೇಶದಲ್ಲಿ ಮುಸ್ಲಿಮರು ಭಯಪಡಬೇಕಿಲ್ಲ ಎಂದು ಹೇಳಿದ್ದರು. ಹಾಗೂ ಎಲ್‌ಜಿಬಿಟಿ ಸಮುದಾಯವನ್ನು ಗೌರವಿಸಬೇಕು, ಅವರು ಕೂಡ ಸಮಾಜದ ಭಾಗ ಎಂದು ಹೇಳಿದ್ದರು.
ಇದನ್ನೂ ಓದಿ: ದೇಶದಲ್ಲಿ ಮುಸ್ಲಿಮರು ಭಯಪಡಬೇಕಿಲ್ಲ, ಶ್ರೇಷ್ಠತೆ ಬಿಡಲಿ: ಮೋಹನ್ ಭಾಗವತ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.