ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ವಹಿವಾಟು: ದಿನದ ಆರಂಭ ಡಾಲರ್ ಎದುರು ರೂಪಾಯಿ 24 ಪೈಸೆ ಏರಿಕೆ 

Last Updated 6 ಮಾರ್ಚ್ 2023, 7:26 IST
ಅಕ್ಷರ ಗಾತ್ರ

ಮುಂಬೈ: 81.73 ಡಾಲರ್ ಎದುರು 24 ಪೈಸೆ ರೂಪಾಯಿ ಏರಿಕೆಯು ಷೇರು ವಹಿವಾಟಿನ ದಿನದ ಆರಂಭ ಕಂಡು ಬಂತು. ಸೋಮವಾರ ನಡೆದ ಈ ವಿದ್ಯಮಾನಕ್ಕೆ ದೇಶಿಯ ಷೇರುಗಳಲ್ಲಿನ ಚೇತರಿಕೆ ಕಾರಣ ಎನ್ನಲಾಗಿದೆ.

‘ಜಾಗತಿಕ ವಹಿವಾಟಿನ ಹಿಂಜರಿತ ಹಾಗೂ ವಿದೇಶಿ ಹಣದ ಒಳಹರಿವು ಸುಧಾರಿಸುತ್ತಿದೆ. ಈ ಹಿನ್ನೆಲೆ, ರೂಪಾಯಿಯನ್ನು ಧನಾತ್ಮಕವಾಗಿ ವಹಿವಾಟಿನಲ್ಲಿ ತೊಡಗಿಸಿಕೊಳ್ಳವ ಸಾಧ್ಯತೆಯಿದೆ‘ ಎಂದು ದಿ ಫಾರೆಕ್ಸ್ ಟ್ರೇಡ್ ತಿಳಿಸಿದೆ. ಜತೆಗೆ, ‘ಡಾಲರ್ ಎದುರು ರೂಪಾಯಿ ಏರಿಕೆಗೆ ವಿದೇಶಿ ಹಣಕಾಸಿನ ಒಳಹರಿವು ಸಹಾಯಕವಾಗಿದೆ‘ ಎಂದಿದೆ.

ಅಲ್ಲದೇ, ಕಚ್ಚಾ ತೈಲದ ದರದಲ್ಲಿನ ಕುಸಿತ ಕೂಡ ರೂಪಾಯಿ ಚೇತರಿಕೆಯ ಮೂಲವಾಗಿದೆ ಎಂದು ತಿಳಿಸಿದೆ.

ಈ ಮಧ್ಯೆ ರೂಪಾಯಿಯೂ ಸೇರಿ ಆರು ರಾಷ್ಟ್ರಗಳ ಕರೆನ್ಸಿ ಎದುರು ಡಾಲರ್‌ ಕುಸಿತ ಕಂಡಿದೆ.

ಶುಕ್ರವಾರದಂದು ನಿವ್ವಳ ಖರೀದಿದಾರರಾಗಿರುವ ವಿದೇಶಿ ಬಂಡವಾಳ ಹೂಡಿಕೆದಾರರು 246.24 ಕೋಟಿಗಳ ಷೇರು ಖರೀದಿಸಿದ್ದು, ಅಂದು ರೂಪಾಯಿ ಎದುರು ಡಾಲರ್ 81.97 ಆಗಿತ್ತು ಎಂದು ಅಂಕಿಅಂಶಗಳ ವಿನಿಮಯ ಮಾಹಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT