ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರ: ದಕ್ಷತೆ ಹೆಚ್ಚಳಕ್ಕೆ ಉಪಗ್ರಹದ ಸಹಾಯ

Last Updated 23 ಆಗಸ್ಟ್ 2020, 16:13 IST
ಅಕ್ಷರ ಗಾತ್ರ

ನವದೆಹಲಿ: ರೈಲುಗಳ ಚಲನೆಯನ್ನು ಉಪಗ್ರಹದ ಮೂಲಕಗುರುತಿಸುವ ವ್ಯವಸ್ಥೆಯನ್ನುಕೋವಿಡ್‌–19ರ ಸಂದರ್ಭದಲ್ಲಿ ಅಳವಡಿಸಲಾಗಿದ್ದು, ಇದರಿಂದ ರೈಲ್ವೆ ಸರಕು ಸಾಗಣೆಯಲ್ಲಿ ದಕ್ಷತೆ ಹೆಚ್ಚಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ವಿದ್ಯುತ್‌ ಮತ್ತು ಡೀಸೆಲ್‌ ಚಾಲಿತ6,500 ರೈಲುಗಳಿಗೆ ‘ಜಿಪಿಎಸ್‌’ ವ್ಯವಸ್ಥೆ ಕಲ್ಪಿಸಲಾಗಿದೆ. ಡಿಸೆಂಬರ್‌ 2021ರ ವೇಳೆಗೆ ಉಳಿದ 6,000 ರೈಲುಗಳಲ್ಲೂ ಈ ವ್ಯವಸ್ಥೆ ಅಳವಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‌ರೈಲ್ವೆ ಮಾಹಿತಿಕೇಂದ್ರವು (ಸಿಆರ್‌ಐಎಸ್‌) ಇಸ್ರೊ ಜೊತೆ ಸೇರಿ ರೈಲು ಸಂಚಾರದ ಕ್ಷಣಕ್ಷಣದ ಮಾಹಿತಿ ನೀಡುವ ‘ಆರ್‌ಟಿಐಎಸ್’ ಸೇವೆಯನ್ನು ಎಲ್ಲ ರೈಲುಗಳಲ್ಲಿ ಅಳವಡಿಸುತ್ತಿದೆ.

ಇಲಾಖೆಯು ಜಿಪಿಎಸ್‌ ಆಧಾರಿತ ಪಥದರ್ಶಕ ವ್ಯವಸ್ಥೆ ‘ಗಗನ್‌’ ತಂತ್ರಜ್ಞಾನ ಹೊಂದಿರುವ ಸಾಧನವನ್ನು ಎಲ್ಲ ರೈಲುಗಳಲ್ಲಿ ಅಳವಡಿಸುತ್ತಿದೆ. ಇದರಿಂದ ರೈಲು ಚಲನೆಯ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹೊಸ ವ್ಯವಸ್ಥೆಯ ಅಳವಡಿಕೆಯಿಂದಾಗಿ ಸರಕು ಸಾಗಣೆಯಲ್ಲಿ ಮಹತ್ವದ ದಾಖಲೆಯನ್ನು ಇಲಾಖೆಯು ಬರೆದಿದೆ ಎಂದೂ ತಿಳಿಸಿದ್ದಾರೆ.

ಅಂಕಿ– ಅಂಶಗಳು

29.7 ಲಕ್ಷ ಟನ್‌ :2019ರ ಆಗಸ್ಟ್‌ 19ರವರೆಗೆ ಆದ ಸರಕು ಸಾಗಣೆ

31.1 ಲಕ್ಷ ಟನ್: 2020ರ ಆಗಸ್ಟ್‌ 19ರವರೆಗೆ ಆದ ಸರಕು ಸಾಗಣೆ

₹ 300.8 ಕೋಟಿ: 2019ರ ಆದಾಯ

₹306.1 ಕೋಟಿ :2020ರ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT