ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ಭಾರತ ಸೇರಿ 15 ದೇಶಗಳಿಗೆ ಪ್ರಯಾಣ ನಿರ್ಬಂಧಿಸಿದ ಸೌದಿ ಅರೇಬಿಯಾ

Last Updated 23 ಮೇ 2022, 7:06 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದಸೌದಿ ಅರೇಬಿಯಾ ಸರ್ಕಾರ ತನ್ನ ರಾಷ್ಟ್ರದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ತೆರಳದಂತೆ ನಿರ್ಬಂಧ ವಿಧಿಸಿದೆ.

ದೇಶದ ಪ್ರಜೆಗಳು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ಬೆಳೆಸುವಂತಿಲ್ಲ ಎಂದುಸೌದಿ ಅರೇಬಿಯಾ ಸರ್ಕಾರದಪಾಸ್‌ಪೋರ್ಟ್‌ ಇಲಾಖೆಅದೇಶ ಹೊರಡಿಸಿದೆ.

ಭಾರತ ಸೇರಿದಂತೆ ಲೆಬನಾನ್‌, ಸಿರಿಯಾ, ಟರ್ಕಿ, ಅಫ್ಘಾನಿಸ್ತಾನ, ಯೆಮನ್, ಸೊಮಾಲಿಯಾ, ಇಥಿಯೋಪಿಯ, ಕಾಂಗೊ, ಲಿಬಿಯಾ, ಇಂಡೋನೇಶಿಯಾ, ವಿಯಾಟ್ನಂ, ಅರ್ಮೇನಿಯ, ಬೆಲಾರಸ್‌ ಮತ್ತು ವೆನಿಜುಲಾ ದೇಶಗಳಿಗೆ ತೆರಳದಂತೆ ಸೌದಿ ಅರೇಬಿಯಾ ಸರಕಾರ ನಿರ್ಬಂಧ ವಿಧಿಸಿದೆ.

ಜಾಗತಿಕವಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಚೀನಾದಲ್ಲಿ ಪ್ರಕರಣಗಳ ಸಂಖ್ಯೆ ಏರು ಮುಖದಲ್ಲಿದೆ. ಅಲ್ಲಿನ ಕೆಲವು ನಗರಗಳಲ್ಲಿ ಲಾಕ್‌ಡೌನ್‌ ವಿಧಿಸಲಾಗಿದೆ.

ಉತ್ತರ ಕೋರಿಯಾದಲ್ಲೂ ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವುದರಿಂದ ಅಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಈ ನಡುವೆ ಕೆಲ ಆಫ್ರಿಕನ್‌–ಯುರೋಪ್‌ ದೇಶಗಳಲ್ಲಿ ಮಂಕಿ ಫಾಕ್ಸ್‌ ವೈರಸ್‌ ಹರಡುತ್ತಿರುವುದರಿಂದ ಮಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT